ಶಾಸಕ ಜಮೀರ್ ಹೇಳಿಕೆ ಖಂಡಿಸಿ ಒಕ್ಕಲಿಗ ಪ್ರತಿಭಟನೆ

6
ಶಾಸಕ ಜಮೀರ್ ಅಹ್ಮದ್ ನೀಡಿದ ಹೇಳಿಕೆ ಖಂಡಿಸಿ ನಗರದಲ್ಲಿ ವಿವಿಧ ಒಕ್ಕಲಿಗ ಸಂಘಟನೆ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಕೆ.ವಿ. ಶ್ರೀಧರ್, ಗಂಗಾಧರ್,ಪ್ರಶಾಂತ್ ಗೌಡ, ಉಮಾಶಂಕರ್, ಗಿರೀಶ್‌ಗೌಡ, ಎ. ರವಿ ಇತರರು ಹಾಜರಿದ್ದರು.
Published on

ಮೈಸೂರು: ಒಕ್ಕಲಿಗ ಸಮುದಾಯದ ಕುರಿತಂತೆ ಶಾಸಕ ಜಮೀರ್ ಅಹ್ಮದ್ ನೀಡಿದ ಹೇಳಿಕೆ ಖಂಡಿಸಿ ನಗರದಲ್ಲಿ ವಿವಿಧ ಒಕ್ಕಲಿಗ ಸಂಘಟನೆಯ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು

ರಾಜ್ಯ ಒಕ್ಕಲಿಗರ ಸಂಘ, ಮೈಸೂರು- ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘ, ಸಿದ್ಧಾರ್ಥನಗರ ಒಕ್ಕಲಿಗರ ಸಂಘ,ರಾಜ್ಯ ಒಕ್ಕಲಿಗರ ವಿಕಾಸವೇದಿಕೆ, ವಿಜಯನಗರ ಒಕ್ಕಲಿಗರ ಸಂಘ ಹೀಗೆ ವಿವಿಧ ಒಕ್ಕಲಿಗರ ಸಂಘಟನೆಯ ಮುಖಂಡರು ಗಾಂಧಿವೃತ್ತದಲ್ಲಿ ಜಮಾಯಿಸಿ ಜಮೀರ್ ವಿರುದ್ಧ ಆಕ್ರೋಶ ಹೊರ ಹಾಕಿದರು.

ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಸಿ.ಜೆ.ಗಂಗಾಧರ್ ಮಾತನಾಡಿ, ರಾಜಕೀಯಕ್ಕಾಗಿ ಕೆಲವರು ಹೀಗೆ ಮಾತನಾಡುವುದು ಖಂಡನೀಯ. ಕೂಡಲೇ ಜಮೀರ್  ಅವರು ಸಮುದಾಯದ ಕ್ಷಮೆಯಾಚಿಸಬೇಕು. ಕಾಂಗ್ರೆಸ್ ಸಹ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಜತೆಗೆ ಯಾವುದೇ ಪಕ್ಷದ ನಾಯಕರೂ ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆ ನೀಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ.ಶ್ರೀಧರ್ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಮುಖಂಡರಾದ ಉಮಾಶಂಕರ್, ಗಿರೀಶ್‌ಗೌಡ, ಎ. ರವಿ, ವಿಕ್ರಾಂತ್ ದೇವೇಗೌಡ, ಯಮುನಾ, ಸುಶೀಲಾ ನಂಜಪ್ಪ, ಯೋಗೇಶ್ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net