ಶಾಸಕ ಚಂದ್ರಪ್ಪರನ್ನು ಉಚ್ಛಾಟಿಸಬೇಕೆನ್ನುವವರಿಗೆ ನೈತಿಕತೆ ಇಲ್ಲ

CTD PRESS MEET-----1
Published on

ಚಿತ್ರದುರ್ಗ: ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅವರನ್ನು ಪಕ್ಷದಿಂದ ಉಚ್ಛಾಟಿಸ ಬೇಕೆಂದು ಹೇಳುವುದಕ್ಕೆ ಜಯಸಿಂಹ ಖಾಟ್ರೋತ್ ಹಾಗೂ ಅವರ ಗುಂಪಿಗೆ ಯಾವುದೇ ನೈತಿಕತೆಯಿಲ್ಲ ಎಂದು ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಬಿ.ಎಂ.ಸಿದ್ದೇಶ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಅಪ್ರಚಾರ ಮಾಡುತ್ತಿರುವ ಗುಂಪು ಗಾ ರಿಕೆಯಲ್ಲಿ ತೊಡಗಿರುವ ಖಾಟ್ರೋತ್,ಕಾರ‌್ಯಕರ್ತರ ಆಕ್ರೋಶ ಎದುರಿಸಬೇಕಾಗುತ್ತದೆ. ವಿವಿಧ ವಿಧಾನಸಭಾ ಚುನಾವಣೆಗಳಲ್ಲಿ ಚಂದ್ರಪ್ಪ ವಿ ರುದ್ಧ ಕೆಲವರನ್ನು ನಿಲ್ಲಿಸಿ ಅ ವರೆಲ್ಲರನ್ನೂ ಬೀದಿಗೆ ತಂದಿದ್ದಾರೆ. ತಾನು ಮೂಲಕ ಬಿಜೆಪಿಯವನು ಎಂದು ಹೇಳಿಕೊಳ್ಳುವ ಅರ್ಹತೆ ಅವರಿಗೆ ಇಲ್ಲ.

ಚಂದ್ರಪ್ಪ ವಿರುದ್ಧ ಪಿತೂರಿ ನಡೆಸುತ್ತಿರುವ ಖಾಟ್ರೋತ್ ಯಾವ ಪಕ್ಷದಲ್ಲಿದ್ದಾರೆ ಎನ್ನುವುದೇ ಗೊತ್ತಿಲ್ಲ,ಎಲ್ಲ ಪಕ್ಷಗಳನ್ನೂ ಅವರು ಸುತ್ತಾಡಿದ್ದಾರೆ ಎಂದು ಟೀಕಿಸಿದರು. ಶಾಸಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ ಸಹಿಸಲಾಗದು, ತಕ್ಕ ಪಾಠ ಕಲಿಸ ಬೇಕಾಗುತ್ತದೆ ಎಂದು ಎಚ್ಚ ರಿಸಿದರು.

ಚಂದ್ರಪ್ಪ ಮೊದಲಿಂದಲೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಎಂ.ಸಿ.ರಘುಚಂದನ್‌ಗೆ ಪಕ್ಷದ ಟಿಕೆಟ್ ಸಿಗಲಿಲ್ಲವೆಂದು ಮುನಿಸಿಕೊಂಡಿದ್ದು ನಿಜ.ಆದರೆ ಈಗ ಎಲ್ಲವೂ ಸರಿ ಹೋಗಿದೆ. ಹೊಳಲ್ಕೆರೆ ಕ್ಷೇತ್ರದಲ್ಲಿ ಕೆರೆ ಕಟ್ಟೆ, ಚೆಕ್‌ಡ್ಯಾಂ,ಶಾಲಾ-ಕಾಲೇಜು,ಉತ್ತಮ ಗುಣಮಟ್ಟದ ರಸ್ತೆ, ಹೈಟೆಕ್ ಆಸ್ಪತ್ರೆಗಳಾಗಿದೆ.ಇಂತಹ ಕೆಲಸ ಆಗಿಲ್ಲವೆಂದು ಯಾರ ಟೀಕೆಗೂ ಒಳಗಾಗದಂತೆ ಶಾಸಕರು ಅಭಿವೃದ್ಧಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಿಪಂ ಮಾಜಿ ಸದಸ್ಯ ತಿಪ್ಪೇಸ್ವಾಮಿ,ಪುರಸಭೆ ಮಾಜಿ ಅಧ್ಯಕ್ಷ ಆರ್.ಅಶೋಕ್,ಶಿವು,ಅಂಕಳಪ್ಪ, ಪ್ರವೀಣ್,ಶಂಕರ್ ನಾಯ್ಕ, ರುದ್ರೇಶ್,ಭದ್ರಾ ನಾಯ್ಕ,ದಯಾನಾಯ್ಕ,ಗಿರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net