ಶಾಸಕ ಗಣೇಶ್‌ಗೆ ಸಚಿವ ಸ್ಥಾನ ನೀಡಲಿ

02KAMPLI 01
Published on

ಕಂಪ್ಲಿ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ, ಮೆಟ್ರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಶಾಸಕ ಜೆ.ಎನ್.ಗಣೇಶ್ ಅವರ 46ನೇ ಜನ್ಮದಿನವನ್ನು ಸೋಮವಾರ ಸಡಗರದಿಂದ ಆಚರಿಸಿದರು.

ಹೊಸಕೋಟೆ ಜಗದೀಶ್ ಮಾತನಾಡಿ, ಶಾಸಕ ಜೆ.ಎನ್.ಗಣೇಶ್ ಅವರ ಅವಿರತ ಶ್ರಮದಿಂದ ಕ್ಷೇತ್ರ ಅಭಿವೃದ್ಧಿಯತ್ತ ಸಾಗಿದೆ. ಶಿಕ್ಷಣ, ಆರೋಗ್ಯ ಸೇರಿದಂತೆ ನಾನಾ ಸೌಲಭ್ಯಗಳನ್ನು ಜನತೆಗೆ ಒದಗಿಸುವಲ್ಲಿ ಗಣೇಶ್ ಶ್ರಮಿಸುತ್ತಿದ್ದಾರೆ. ಗಣೇಶ್ ಮಾದರಿ ಶಾಸಕರಾಗಿದ್ದು, ಅವರನ್ನು ಸಚಿವರನ್ನಾಗಿಸುವುದರೊಂದಿಗೆ ಜಿಲ್ಲಾ ಉಸ್ತುವಾರಿ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಬೇಕು ಎಂದು ಒತ್ತಾಯಿಸಿದರು.

ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಮಳೆ ಬರಲ್ಲ. ಗ್ಯಾರಂಟಿಯಿಂದ ಯೋಜನೆಗಳಿಗೆ ದುಡ್ಡಿಲ್ಲ ಎಂಬ ವಿಪಕ್ಷದವರ ಆರೋಪ ಹುಸಿಯಾಗಿದೆ. ರಾಜ್ಯದಲ್ಲಿ ಸಮರ್ಪಕ ಮಳೆಯಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ರೂ. ದೊರೆತಿದೆ. ಏತ ನೀರಾವರಿ ಯೋಜನೆಗೆ 140 ಕೋಟಿ ರೂ. ಮಂಜೂರಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಸಿಹಿ ತಿನಿಸು ಹಾಗೂ ನೋಟ್ ಪುಸ್ತಕ, ಲೇಖನಿ ವಿತರಿಸಲಾಯಿತು. ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಪ್ರಮುಖರಾದ ಸಿ.ಆರ್.ಹನುಮಂತ, ಹೊನ್ನಳ್ಳಿ ಗಂಗಾಧರ, ಬಿ.ನಾರಾಯಣಪ್ಪ, ಬಿ.ನಾರಾಯಣಪ್ಪ, ಜಿ.ಮರೇಗೌಡ, ಜಿ.ಅಂಜಿನಪ್ಪ, ಕರಿಬಸವನಗೌಡ್ರು, ಕೆ.ರಾಜಪ್ಪ, ಕೆ.ರೇಣುಕಪ್ಪ, ಮೆಟ್ರಿ ಜಗದೀಶ್, ಬಳೆ ಮಲ್ಲಿಕಾರ್ಜುನ, ಹಾದಿಮನಿ ಕಾಳಿಂಗವರ್ಧನ, ಬಿ.ಜಾಫರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net