

ಚಿತ್ರದುರ್ಗ: ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ತಮ್ಮ ಬೆಲೆಯನ್ನು ತಾವೇ ನಿಗದಿ ಮಾಡಿಕೊಂಡು ಘೋಷಿಸಿದ್ದಾರೆ ಎಂದು ಸಂಸದ ಗೋವಿಂ ದ ಎಂ.ಕಾರಜೋಳ ವ್ಯಂಗ್ಯವಾಡಿದರು.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಹರಾಜಿನಲ್ಲಿ ಸರ್ಕಾರಿ ಸವಾಲೆಂದು ಬೆಲೆ ನಿಗದಿಯಾಗುತ್ತದೆ. ಅದೇ ರೀತಿ ರವಿ ತಮ್ಮ ಬೆಲೆ ನೂರು ಕೋಟಿ ರೂ.ಎಂದು ಘೋಷಿಸಿಕೊಂಡಿದ್ದಾರೆ. ತಾನಾಗಿಯೇ ಬೀಳಲಿರುವ ಸರ್ಕಾರವನ್ನು ನಾವು ಯಾಕೆ ಕೆಡವಬೇಕು ಎಂ ದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಈ ಮೊದಲಿದ್ದಂತೆ ಇಲ್ಲ. ನಾನೂ ಕೂಡ ಅವರೊಂದಿಗೆ ಕೆಲಸ ಮಾಡಿದ್ದೇನೆ. ಆರೋಪ ಕೇಳಿ ಬಂದಾಗ ನೇರ ವಾಗಿ ಉತ್ತರಿಸುತ್ತಿದ್ದರು. ಆದರೆ ಈಗ ಸುತ್ತಿ ಬಳಸಿ ಉತ್ತರಿಸುತ್ತಾರೆ. ತಾನು ಸರಿ ಇದ್ದೇನೆ ಎನ್ನುವುದಾದರೆ ಸಿದ್ದರಾಮಯ್ಯ ಮೊದಲು ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ರಾಜಭವನದ ಮುತ್ತಿಗೆಯಂಥ ಕಾರ‌್ಯಕ್ರಮಗಳು ಗಿಮಿಕ್ ರಾಜಕಾರಣ ಎಂದರು.
ನಟ ದರ್ಶನ್ ಪ್ರಕರಣ ಗಮನಿಸಿದರೆ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಅಪರಾಧ ಕೃತ್ಯಗಳು ಎಗ್ಗಿಲ್ಲದೆ ನಡೆಯು ತ್ತಿವೆ. ಸಿದ್ದರಾಮಯ್ಯಗೆ ಆಡಳಿತದ ಮೇಲೆ ಹಿಡಿತ ಇಲ್ಲವಾಗಿದೆ. ಭ್ರಷ್ಟಾಚಾರ ವ್ಯಾಪಕವಾಗಿದೆ. ಧರ್ಮ, ಜಾತಿ ಹೆಸರಲ್ಲಿ ಭ್ರಷ್ಟಾಚಾರ ಆರೋಪಗಳಿಂದ ರಕ್ಷಣೆ ಮಾಡಿಕೊಳ್ಳುವುದು ಸಲ್ಲದು. ಅದನ್ನು ಯಾರೇ ಮಾಡಿದರೂ ತಪ್ಪು ಎಂದರು.
ಬಿಜೆಪಿ ಮುಖಂಡ ಬಾಳೇಕಾಯಿ ರಾಮದಾಸ್ ಇದ್ದರು.
(ಗೋವಿಂದ ಎಂ.ಕಾರಜೋಳ ಮಗ್ ಶಾಟ್)