

ಬೀದರ್: ತಾಲೂಕಿನ ವಿವಿಧೆಡೆ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ರಹೀಮ್ ಖಾನ್ ಭೇಟಿ ನೀಡಿ ಪರಿಶೀಲಿಸಿದರು.
ಅಲಿಯಾಬಾದ್ ಗ್ರಾಮದಲ್ಲಿ ಕುಸಿದು ಬಿದ್ದ ಶರಣಮ್ಮ ತಿಪ್ಪಣ್ಣ, ಸಿಮೊನ್ ಬಾಬು ಮನೆಗೆ ತೆರಳಿದರು. ವಿಳಾಸಪುರ ಸಮೀಪ ಮಳೆ ನೀರಿನಲ್ಲಿ ಮುಳುಗಿದ ಸೇತುವೆಯನ್ನು ವೀಕ್ಷಿಸಿದರು.
ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸೇತುವೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ವಿಳಾಸಪುರ ಸೇತುವೆಗೆ ಹಾನಿ ಉಂಟಾಗಿದೆ. ನೀರು ಸೇತುವೆ ಮೇಲಿಂದ ಹರಿಯುತ್ತಿರುವುದರಿಂದ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಹೊಸ ಸೇತುವೆ ನಿರ್ಮಾಣಕ್ಕೆ 1.5 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ವಕ್೯ ಆರ್ಡರ್ ಗೆ ಸ್ವಲ್ಪ ಸಮಯ ಹಿಡಿಯಲಿದೆ ಎಂದು ಶಾಸಕರು ಹೇಳಿದರು.