ಶಾಸಕ ಕೌಜಲಗಿ ಕಾರ್ಯ ಶ್ಲಾಘನೀಯ

11Murgod1
ಮುರಗೋಡ ಗ್ರಾಮದಲ್ಲಿ ಬೀದಿ ದೀಪಗಳನ್ನು ನೀಲಕಂಠ ಸ್ವಾಮೀಜಿ ಉದ್ಘಾಟಿಸಿದರು. ಸಂಗಪ್ಪ ಬೆಳಗಾವಿ, ಸಂತೋಷ ಶೆಟ್ಟರ, ರಾಜು ಕಲಾಲ, ಕೊಂತೆಪ್ಪ ಬೆಳಗಾವಿ ಇತರರು ಇದ್ದರು.
Published on

ಮುರಗೋಡ: ಬೈಲಹೊಂಗಲ ವಿಧಾನ ಸಭಾ ಮತಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಜನರಿಗೆ ಅವಶ್ಯವಿರುವ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಶಾಸಕ ಮಹಾಂತೇಶ ಕೌಜಲಗಿ ಕಾರ್ಯ ಶ್ಲಾಘನೀಯ ಎಂದು ಮಹಾಂತ ದುರದುಂಡೇಶ್ವರ ಮಠದ ಪೀಠಾಧಿಕಾರಿ ನೀಲಕಂಠ ಸ್ವಾಮೀಜಿ ಹೇಳಿದರು.

ಗ್ರಾಮದ ಹೊಸ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರ ತಲ್ಲೂರ ರಸ್ತೆ ಮಾರ್ಗವಾಗಿ ಸುಮಾರು 2 ಕಿ.ಮೀ. ವರೆಗೆ 70ಕ್ಕೂ ಹೆಚ್ಚು ಬೀದಿ ದೀಪಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕ ಮಹಾಂತೇಶ ಕೌಜಲಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಮುರಗೋಡ ಭಾಗಕ್ಕೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಾಗಲಿ ಎಂದು ಆಶಿಸಿದರು. ಗ್ರಾಪಂ ಸದಸ್ಯರಾದ ಸಂತೋಷ ಶೆಟ್ಟರ, ರಾಜು ಕಲಾಲ, ಕೊಂತೆಪ್ಪ ಬೆಳಗಾವಿ, ಶಿವು ಮಿಡಚಿ, ವಿ.ಬಿ.ದೇಸಾಯಿ, ಅಶೋಕ ಶೆಟ್ಟರ, ಹುಲ್ಲೆಪ್ಪ ರಗಟ್ಟಿ, ಶಿವನಗೌಡ ಪಾಟೀಲ, ಈರಪ್ಪ ಕೆಂಗೇರಿ, ಮಲ್ಲಪ್ಪ ಕುರಬೇಟ, ಕುಮಾರ ಪೂಜೇರಿ, ಬಸವರಾಜ ಹುಚ್ಚನಟ್ಟಿ, ಪ್ರಕಾಶ ಹಟ್ಟಿಹೋಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net