ಶಾಸಕ ಎಸ್ಸೆಸ್‌ರಿಂದ ತುಲಾಭಾರ ಸೇವೆ ಸಮರ್ಪಣೆ

IMG-20221210-WA0067.jpg
Published on

ದಾವಣಗೆರೆ: ದಾವಣಗೆರೆ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಶನಿವಾರ ಸಂಜೆ ಟ್ರಸ್ಟ್‌ನ ಗೌರವಾಧ್ಯಕ್ಷ, ಶಾಸಕರೂ ಆದ ಡಾ.ಶಾಮನೂರು ಶಿವಶಂಕರಪ್ಪನವರು ತಮ್ಮ ಬೇಡಿಕೆಯಂತೆ ತುಲಾಭಾರ ಸಮರ್ಪಿಸಿದರು.

92 ವರ್ಷಕ್ಕೆ ಪದಾರ್ಪಣೆ ಮಾಡಿರುವ ಶಾಮನೂರು ಶಿವಶಂಕರಪ್ಪನವರು ಹಲವು ದೇವಸ್ಥಾನ, ಮಠ-ಮಂದಿರಗಳಿಗೆ ದಾನ ಮಾಡುತ್ತಾ ಬಂದಿದ್ದು, ಶನಿವಾರ ನೆರವೇರಿಸಿಕೊಂಡ ತುಲಾಭಾರದ ವಸ್ತುಗಳನ್ನು ದೇವಸ್ಥಾನಕ್ಕೆ ಸಮರ್ಪಿಸಿದರು. ಶಿವಶಂಕರಪ್ಪನವರ ಸೊಸೆಯಂದಿರಾದ ಪ್ರೀತಿ ಬಕ್ಕೇಶ್, ಪ್ರಭಾ ಮಲ್ಲಿಕಾರ್ಜುನ್, ಮೊಮ್ಮಗ ಶಿವ ಉಪಸ್ಥಿತರಿದ್ದು, ತುಲಾಭಾರಕ್ಕೆ ಸಹರಕಸಿದರು. ಟ್ರಸ್ಟಿಗಳಾದ ಗೌಡ್ರು ಚನ್ನಬಸಪ್ಪ, ಜೆ.ಕೆ.ಕೊಟ್ರಬಸಪ್ಪ, ಎಚ್.ಬಿ.ಗೋಣೆಪ್ಪ, ಉಮೇಶ್‌ರಾವ್ ಸಾಳಂಕಿ, ಸೊಪ್ಪಿನ ಗುರುರಾಜ್, ಪಿಸಾಳೆ ಸತ್ಯನಾರಾಯಣರಾವ್, ರಾಮಚಂದ್ರಪ್ಪ ಪಟೇಲ್, ಗುಡ್ಡಣ್ಣರ ಶಿವಶಂಕರಪ್ಪ, ಮುಖಂಡರಾದ ಜಿ.ಸಿ.ನಿಂಗಪ್ಪ ಹದಡಿ, ಪಾಲಿಕೆ ವಿಪಕ್ಷ ನಾಯಕ ಜಿ.ಎಸ್. ಮಂಜುನಾಥ್, ಇಟ್ಟಿಗುಡಿ ಮಂಜುನಾಥ್, ಪ್ರವೀಣ್, ವೆಂಕಟೇಶ್ ನಾಯ್ಕ, ಕವಿರಾಜ್ ಮತ್ತಿತರರಿದ್ದರು. --
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net