ಶಾಸಕ ಅಲ್ಲಮಪ್ರಭು ಪಾಟೀಲರಿಂದ ಜನಸ್ಪಂದನದಲ್ಲಿ ಸ್ಥಳದಲ್ಲೇ ಪರಿಹಾರ

3111Klb13
Published on

ಕಲಬುರಗಿ: ಸಾವಳಗಿ ಗ್ರಾಮದಲ್ಲಿ ಶನಿವಾರ ನಡೆದ ಜನಸ್ಪಂದನದಲ್ಲಿ ೧೦೩ ಅರ್ಜಿಗಳು ಬಂದಿದ್ದು, ಬಹುತೇಕ ಮನವಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಯಿತು.

ಶಾಸಕ ಅಲ್ಲಮಪ್ರಭು ಪಾಟೀಲ್ ನೇತೃತ್ವದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸರ್ಕಾರದ ಎಲ್ಲ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸುಮಾರು ಮೂರು ಗಂಟೆ ಸಭೆ ನಡೆಯಿತು.

ಕಂದಾಯ ಇಲಾಖೆಯ ೭೪, ಪಂಚಾಯತ್ ರಾಜ್ ಇಂಜಿನಿಯರಿAಗ್‌ಗೆ ೧೯, ಜೆಸ್ಕಾಂ ನಾಲ್ಕು, ಶಿP್ಷÀಣ ಹಾಗೂ ಆರೋಗ್ಯ ಇಲಾಖೆಯ ತಲಾ ಒಂದೊAದು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಾಲ್ಕು ಅಹವಾಲುಗಳನ್ನು ಆಲಿಸಿದ ಆಶಕರು ಬಹುತೇಕ ಅಹವಾಲುಗಳಿಗೆ ಸೂಕ್ತ ಪರಿಹಾರ ಸೂಚಿಸಿದರು.

ಕೆಲ ಅಹವಾಲುಗಳಲ್ಲಿ ತಾಂತ್ರಿಕ ಸಂಗತಿಗಳು ಇರುವುದರಿಂದ ಅಂತಹವುಗಳನ್ನು ಇಲಾಖೆಯ ವ್ಯಾಪ್ತಿಯಲ್ಲಿ ಪರಿಶೀಲಿಸಿ, ಕಾನೂನು ರಿತ್ಯ ಪರಿಹಾರ ನೀಡುವಂತೆ ಶಾಸಕರು, ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.

೫೦೦ಕ್ಕೂ ಹೆಚ್ಚು ಹಳ್ಳಿ ಜನ ಪಾಲ್ಗೊಂಡು ಅಹವಾಲು ಶಾಸಕರ ಗಮನಕ್ಕೆ ತಂದರು. ಸ್ಥಳದಲ್ಲೇ ಶೇ.೫೦ ಅಹವಾಲುಗಳಿಗೆ ಪರಿಹಾರ ಸೂಚಿಸಿದರು. ಗ್ರಾಪಂ ಅಧ್ಯಕ್ಷ ರಮೇಶ ಕನಗೊಂಡ, ಉಪಾಧ್ಯಕ್ಷ ಅರುಣಿಕಾ ಸೋಮಲಿಂಗ, ಬ್ಲಾಕ್ ಕಾಂಗ್ರೆಸ್ ಅಧ್ಯP್ಷÀ ಲಿಂಗರಾಜ ಕಣ್ಣಿ ಸೇರಿ ಎಲ್ಲ ಇಲಾಖೆ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net