

ಆಳಂದ: ಪಟ್ಟಣದಲ್ಲಿ ನೀರಿನ ಸಮಸ್ಯೆ ಹೆಚ್ಚಿದ್ದು, ಸದ್ಯ ೮-೧೦ ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ೬೬ ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರು ಪೂರೈಕೆಯ ಅಮೃತ ಯೋಜನೆಗಾಗಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಮ್ಮತಿಯೂ ನೀಡಿದ್ದಾರೆ ಎಂದು ಶಾಸಕ ಬಿ.ಆರ್.ಪಾಟೀಲ್ ತಿಳಿಸಿದರು.
ಶ್ರೀರಾಮ ಮಾರ್ಕೆಟ್ ಆವರಣದಲ್ಲಿ ತಾಲೂಕು ಆಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಅವಧಿಯಲ್ಲಿ ಕೈಗೊಂಡಿದ್ದ ಶಿವಪುರ ಮಾದರಿ ನೀರು ಇಂಗಿಸುವ ಕಾರ್ಯದಿಂದ ಮಾದನಹಿಪ್ಪರಗಾ, ಪಡಸಾವಳಿ, ಕಿಣ್ಣಿಸುಲ್ತಾನ, ಧುತ್ತರಗಾಂವ್ ಸೇರಿ ಇನ್ನಿತರ ಗ್ರಾಮಗಳ ಜನತೆಗೆ ನೆರವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಳ್ಳಿಗಳಿಗೂ ಯೋಜನೆ ವಿಸ್ತರಿಸಲಾಗುವುದು ಎಂದರು.
ಕಮಲಾನಗರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಚಂದ್ರಶೇಖರ ಕಟ್ಟಿಮನಿ ಉಪನ್ಯಾಸ ನೀಡಿದರು.
ಪ್ರಭಾರಿ ತಹಸೀಲ್ದಾರ್ ಭೀಮಣ್ಣ ಕುದುರಿ, ಡಿವೈಎಸ್‌ಪಿ ಗೋಪಿ ಆರ್., ತಾಪಂ ಇಒ ಮಾನಪ್ಪ ಕಟ್ಟಮನಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಶಂಭುಲಿಂಗ ಕಣ್ಣಿ, ಅಧಿಕಾರಿಗಳಾದ ಡಾ.ಸಂಜಯ ರೆಡ್ಡಿ, ಬಾಸು ಚವ್ಹಾಣ್, ಮಹಾದೇವ ಪಂಚಮುಖಿ, ಸೋಮಶೇಖರ ಹಂಚಿನಾಳ, ಸಂಗಮೇಶ ಬಿರಾದಾರ, ಶರಣಗೌಡ ಪಾಟೀಲ್, ಶಂಕರಗೌಡ, ಶಾಂತಪ್ಪ ಜಾಧವ್, ಗೌತಮ ಕಾಂಬಳೆ ಇತರರಿದ್ದರು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.