

ಹಾಸನ: ನಗರದ ವಿಜಯನಗರ ಬಡಾವಣೆಗೆ ಹೇಮಾವತಿ ನದಿಯಿಂದ ಶಾಶ್ವತ ಕುಡಿಯುವ ನೀರು ಒದಗಿಸುವ ಸಲುವಾಗಿ ಪೈಪ್‌ಲೈನ್ ಮಾಡುವ ಕಾಮಗಾರಿಗೆ ಶಾಸಕರಾದ ಎಚ್.ಪಿ. ಸ್ವರೂಪ್ ಪ್ರಕಾಶ್ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ಬಡಾವಣೆಯ ಸಂಘದ ಪದಾಧಿಕಾರಿಗಳು ಮತ್ತು ನಿವಾಸಿಗಳ ಬಹುದಿನದ ಬೇಡಿಕೆಯಾಗಿದ್ದ ಶಾಶ್ವತ ನದಿ ನೀರು ಯೋಜನಗೆ ಚಾಲನೆ ನೀಡಲಾಗಿದೆ. ಇದುವರೆಗೂ ಈ ಬಡಾವಣೆ ಜನರಿಗೆ ಕೊಳವೆ ಬಾವಿಗಳಿಂದ ಕುಡಿಯುವ ನೀರನ್ನು ಒದಗಿಸಲಾಗುತ್ತಿತ್ತು. ಇನ್ನು ಮುಂದೆ ಹೇಮಾವತಿ ನದಿ ನೀರು ಶಾಶ್ವತವಾಗಿ ಮನೆ ಬಾಗಿಲಿಗೆ ಬರಲಿದೆ ಎಂದರು.
ಈ ಸಂದರ್ಭದಲ್ಲಿ ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಚ್. ನಾರಾಯಣಗೌಡ, ಉಪಾಧ್ಯಕ್ಷ ಎಚ್.ಟಿ. ಮಲ್ಲಿಕಾರ್ಜುನ್, ಖಜಾಂಚಿ ಬಿ.ಆರ್. ಮೊಗಣ್ಣಗೌಡ, ಸಂಘದ ನಿರ್ದೇಶಕರಾದ ಬ್ಯಾಟಾಚಾರ್, ಚಂದ್ರೇಗೌಡ, ನಾಗರಾಜ್, ಸೋಮಣ್ಣ ತಾಳೂರು, ರವಿಕುಮಾರ್, ಅನಂತರಾಮ್, ಬೆಟ್ಟೇಗೌಡ, ಅಧಿಕಾರಿಗಳಾದ ಎಇಇ ಚೆನ್ನೆಗೌಡ, ಇಂಜಿನಿಯರ್ ಕವಿತಾ, ಹೆಲ್ತ್ ಇನ್ಸ್ಪೆಕ್ಟರ್ ಪ್ರಸಾದ್ ಮತ್ತು ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.