ಶಾಲೆವಾಡಕ್ಕೆ ಉಪವಿಭಾಗಾಧಿಕಾರಿ ಪ್ರಿಯಾಂಗಾ ಭೇಟಿ

20KWR-Priyanga M
Published on

ಕಾರವಾರ: ನಗರದ ಶಾಲೆವಾಡ ಜನರ ಸಮಸ್ಯೆಯನ್ನು ಪ್ರಭಾರ ಪೌರಾಯುಕ್ತೆ ಹಾಗೂ ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ.ಆಲಿಸಿದ್ದಾರೆ. ಶುಕ್ರವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ್ದಾರೆ. ಸಂಪೂರ್ಣ ನೀರು ತುಂಬಿಕೊಂಡು, ಜನ, ವಾಹನ ಓಡಾಡಲೂ ಆಗದ ಪರಿಸ್ಥಿತಿ ಶಾಲೆವಾಡದಲ್ಲಿತ್ತು. ವಿಜಯವಾಣಿ ಜೂನ್ 18 ರಂದು ‘ಜಲಾಶಯದಂತಾದ ಶಾಲೆವಾಡ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ಅದಕ್ಕೆ ಪ್ರಿಯಾಂಗಾ ಅವರು ಸ್ಪಂದಿಸಿದ್ದಾರೆ.

ಸದ್ಯ ನೀರು ಹರಿದು ಹೋಗಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು. ರಸ್ತೆಯ ಜಾಗ ಇನ್ನೂ ನಗರಸಭೆಗೆ ಹಸ್ತಾಂತರವಾಗಿಲ್ಲ. ಈ ಸಂಬಂಧ ಜಾಗದ ಮಾಲೀಕರು ಪತ್ರ ಕೊಟ್ಟರೆ ಕಾಂಕ್ರಿಟ್ ರಸ್ತೆ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗುವುದು. ಪ್ರಿಯಾಂಗಾ ಎಂ. ಉಪವಿಭಾಗಾಧಿಕಾರಿ, ಕಾರವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net