ಶಾಲೆಯಲ್ಲಿ ಶಿಸ್ತಿನ ವಾತಾವರಣ ಇರಲಿ

17 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನೆಯೂ ಕೂಡ ಒಂದು ಮಂತ್ರಿಮಂಡಲವಿದ್ದಂತೆ. ಅಲ್ಲಿರುವಂತಹ ಶಿಸ್ತಿನ ವಾತಾವರಣವು ಶಾಲೆಯಲ್ಲೂ ಇರುವಂತೆ ಸಂಸತ್ ಸದಸ್ಶರು ನೋಡಿಕೊಳ್ಳಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸಲಹೆ ನೀಡಿದರು.
ನಗರದ ಕರ್ನಾಟಕ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಾಲಾ ಸಂಸತ್ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಶಕ್ಷತೆ ವಹಿಸಿದ್ದ ಶಾಲೆ ಆಡಳಿತಾಧಿಕಾರಿ ಜಿ. ಆರ್.ಭಟ್ ಮಾತನಾಡಿ, ಮಕ್ಕಳು ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು ಭವಿಷ್ಶದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು. ಶಾಲೆಯಲ್ಲಿ ಸಂಸತ್ ರಚನೆ ಮಾಡುವುದರಿಂದ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಯುವುದಲ್ಲದೆ, ಸಂಸತ್ತಿನ ಕಾರ್ಯ ವೈಖರಿ ತಕ್ಕ ಮಟ್ಟಿಗೆ ತಿಳಿಸುವ ಕೆಲಸವಾಗಲಿದೆ ಎಂದರು.
ಸಂಸತ್ ಸಮಿತಿ ಅಧ್ಯಕ್ಷೆ ಶೋಭದೇವಿ, ಶಿಕ್ಷಕರಾದ ಕೆ.ಸಿ. ಪ್ರಾಕಾಶ, ಎಸ್.ಎಂ. ಬೊಂಗಾಳೆ, ಆರ್.ಎಫ್. ಮೂಲಿಮನಿ, ಚುನಾವಣಾ ಸಮಿತಿ ಸದಸ್ಯರಾದ ಪ್ರಜ್ಞಾ ಗಲಗಲಿ, ಶಿವಾನಂದ ಹೂಗಾರ, ವೆಂಕಟೇಶಗೌಡ ಪಾಟೀಲ, ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು.
ಪ್ರಾಂಶುಪಾಲ ಎನ್.ಎನ್. ಸವಣೂರ ಸ್ವಾಗತಿಸಿದರು. ಪದ್ಮಾವತಿ ಅಂಗಡಿ ನಿರೂಪಿಸಿದರು. ಶಿವಲೀಲಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net