ಶಾಲೆಯಲ್ಲಿ ಪರಿಸರ ಸ್ನೇಹಿ ಗಣಪ

19KMD-1
Published on

ಕೆ.ಎಂ.ದೊಡ್ಡಿ : ಪಿಒಪಿ ಮತ್ತು ರಾಸಾಯನಿಕಯುಕ್ತ ಗಣೇಶ ಮೂರ್ತಿಗಳನ್ನು ಕೆರೆ, ನದಿಗಳಲ್ಲಿ ವಿಸರ್ಜಿಸುವುದರಿಂದ ನೀರು ಕಲುಷಿತಗೊಳ್ಳುವುದಲ್ಲದೇ ಪರಿಸರದ ಮೇಲೆ ಮಾರಕ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಪರಿಸರ ಸ್ನೇಹಿ ಗಣಪತಿ ಕೂರಿಸುವ ಪರಿಪಾಠ ಹೆಚ್ಚಾಗುತ್ತಿದೆ.
ಅದೇ ರೀತಿ ಕೆ.ಎಂ. ದೊಡ್ಡಿಯ ಪ್ರಾರ್ಥನಾ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಮಂಡ್ಯದ ವಿಕಸನ ಸಂಸ್ಥೆ ತಯಾರಿಸಿದ್ದ ಪರಿಸರ ಸ್ನೇಹಿ ಬೆಲ್ಲದ ಗಣಪತಿ ಮತ್ತು ಗೌರಮ್ಮನನ್ನು ಪ್ರತಿಷ್ಠಾಪಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಲಿ ಎಂಬುದು ಇದರ ಹಿಂದಿನ ಮುಖ್ಯ ಉದ್ದೇಶ. ಶಾಲೆಯ ಆಡಳಿತ ಮಂಡಳಿಯ ಈ ಉದ್ದೇಶ ಸಾರ್ವಜನಿಕವಾಗಿ ಮೆಚ್ಚುಗೆಯಾಗುವುದರ ಜತೆಗೆ ಪರಿಸರ ಬಗ್ಗೆ ಅವರಿಗಿರುವ ಕಾಳಜಿಗೂ ಸಾಕ್ಷಿಯಾಗಿದೆ.
ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಕೃಷ್ಣ, ಶಿಕ್ಷಕರಾದ ಅಶ್ವಿನಿ, ಸವಿತಾ, ಶೋಭಾರಾಣಿ, ಸ್ಮಿತಾ, ರಮ್ಯ, ಕೃತಿಕಾ, ಪ್ರಿಯಾಂಕ, ಅಕ್ಷತಾ, ರಂಜಿತಾ, ರೂಹಿ, ಕೆ.ಎನ್. ಅನುಪಮಾ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net