ಶಾಲೆಯಲ್ಲಿ ಗ್ಯಾಸ್ ಸಿಲಿಂಡರ್, ಅಕ್ಕಿ ಕಳವು

theft home
Published on

ಹಾಸನ: ತಾಲೂಕಿ ಕಸಬಾ ಹೋಬಳಿ, ಅಗಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಾಸೋಹದ ಕೊಠಡಿಯ ಬೀಗ ಮುರಿದು 1 ಗ್ಯಾಸ್ ಸಿಲಿಂಡರ್ ಹಾಗೂ 20 ಕೆ.ಜಿ. ಅಕ್ಕಿ ಕಳವು ಮಾಡಲಾಗಿದೆ.
ಶನಿವಾರ ಶಾಲೆ ಮುಗಿದ ಬಳಿಕ ಎಲ್ಲ ಕೊಠಡಿಗಳ ಬೀಗ ಹಾಕಿಕೊಂಡು ಹೋಗಲಾಗಿದ್ದು, ಸೋಮವಾರ ಶಿಕ್ಷಕರು ಶಾಲೆಗೆ ಬಂದು ನೋಡಿದಾಗ ಯಾರೋ ಕಳ್ಳರು ಶಾಲೆಯ ದಾಸೋಹದ ಕೊಠಡಿಯ ಬೀಗವನ್ನು ಒಡೆದು ಒಂದು ಗ್ಯಾಸ್ ಸಿಲಿಂಡರ್ ಮತ್ತು 20 ಕೆಜಿ ಅಕ್ಕಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಪತ್ತೆಯಾಗಿದೆ. ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕರಾದ ಕಮಲಾನಾಯ್ಕ ಅವರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net