ಶಾಲೆಯ ಕಿಟಕಿ-ಗಾಜು ಪುಡಿಪುಡಿ

WINDOW BROKEN
Published on

ಮುಂಡರಗಿ: ತಾಲೂಕಿನ ಬಿದರಹಳ್ಳಿ ಪುನರ್ವಸತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಿಡಿಗೇಡಿಗಳು ಬುಧವಾರ ಕಿಟಕಿ ಗಾಜುಗಳನ್ನು ಒಡೆದು ಹಾಳು ಮಾಡಿದ್ದಾರೆ.

ಕಿಟಕಿ ಗಾಜುಗಳನ್ನು ಕಲ್ಲಿನಿಂದ ಒಡೆದು ಪುಡಿಪುಡಿ ಮಾಡಿದ್ದಾರೆ. ಆವರಣದಲ್ಲಿನ ಗಿಡಗಳನ್ನು ಕಿತ್ತು ಮುರಿದು ಹಾಕಿದ್ದಾರೆ.

ಅಲಂಕಾರಿಕ 9ಕ್ಕೂ ಹೆಚ್ಚು ಹೂ ಕುಂಡಗಳನ್ನು ನೆಲಕ್ಕೆಸೆದು ಹಾಳು ಮಾಡಿದ್ದಾರೆ. ಟೈಲ್ಸ್‌ಗಳನ್ನು ಒಡೆದು ದುಷ್ಕೃತ್ಯವೆಸಗಿದ್ದಾರೆ.

ಸದ್ಯ ಶಾಲೆಗೆ ಬೇಸಿಗೆ ರಜೆ ಇದ್ದು, ಶಾಲಾ ಸಹ ಶಿಕ್ಷಕರು ಗುರುವಾರ ಬೆಳಗ್ಗೆ ಶಾಲೆಗೆ ಹೋದಾಗ ಈ ಘಟನೆ ನಡೆದಿರುವುದು ತಿಳಿದಿದೆ.

ಯಾರೋ ಕಿಡಿಗೇಡಿಗಳು ವಿದ್ಯಾದೇಗುಲದ ಮೇಲೆ ಈ ರೀತಿಯಾಗಿ ನಡೆದುಕೊಂಡಿದ್ದು ಆಕ್ರೋಶ ಮತ್ತು ಬೇಸರ ತರಿಸಿದೆ. ಬುಧವಾರ ಕಿಟಕಿ, ಗಿಡಮರ, ಹೂಕುಂಡ ಧ್ವಂಸ ಮಾಡಿದ್ದಾರೆ. ಗ್ರಾಮಸ್ಥರೊಂದಿಗೆ ಈ ಕುರಿತು ಚರ್ಚಿಸಿ ಮೇಲಾಧಿಕಾರಿಗಳಿಗೆ ಪತ್ರ ಬರೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.ಬಿ.ಎಂ. ಸಜ್ಜನರ, ಬಿದರಹಳ್ಳಿ ಸ.ಹಿ.ಪ್ರಾ.ಶಾಲೆ ಮುಖ್ಯಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net