ಶಾಲೆಗೆ ರಜೆ; ಕಂಪ್ಯೂಟರ್, ಅಡುಗೆ ಪದಾರ್ಥಗಳ ಕಳವು

Thief
Published on

ಅರಕಲಗೂಡು : ನಿರಂತರ ಮಳೆ ಹಿನ್ನಲೆಯಲ್ಲಿ ಶಾಲೆ ರಜೆ ಘೆಟಿಜಜಿಟಿಜ?ಷಿಸಿರುವುದನ್ನೆ? ಬಂಡವಾಳ ಮಾಡಿಕೊಂಡ ಕಳ್ಳರು ಶಾಲೆ ಬೀಗ ಮುರಿದು ಯುಪಿಎಸ್? ಬ್ಯಾಟರಿ ಹಾಗು ಧಾನ್ಯಗಳ ಕಳವು ಮಾಡಿರುವ ಘಟನೆ ತಾಲ್ಲೂಕಿನ ರಾಮನಾಥಪುರದ ಪಟ್ಟಾಭಿರಾಮ ಗ್ರಾಮಾಂತರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದಿದೆ.

ಮುಖ್ಯೊಪಾಧ್ಯಾಯರ ಕೊಠಡಿ, ಕಂಪ್ಯೂಟರ್ ಕೊಠಡಿ ಬೀಗ ಮುರಿದು ಕೈಗೆ ಸಿಕ್ಕಿದ್ದನ್ನೆಲ್ಲ ದೋಚಿದ್ದಾರೆ. 98 ಸಾವಿರ ರೂ. ಮೌಲ್ಯದ 13 ಬ್ಯಾಟರಿ, 8 ಅಕ್ಕಿ ಚೀಲ, 2 ಗೋದಿ ಚೀಲ, 20 ಹಾಲಿನ ಪೌಡರ್ ಪ್ಯಾಕೇಟ್, 2 ತುಂಬಿದ ಗ್ಯಾಸ್ ಸಿಲಿಂಡರ್, 1 ಖಾಲಿ ಸಿಲಿಂಡರ್ ಕಳವು ಮಾಡಿದ್ದಾರೆ. ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net