ಶಾಲೆಗೆ ಮೈದಾನ, ಬಸ್, ಶೌಚಗೃವಿಲ್ಲ

1911KLb23
Published on

ಕಲಬುರಗಿ: ಶಾಲೆಯಲ್ಲಿ ಆಟ ಆಡೋಕೆ ಮೈದಾನವಿಲ್ಲ, ಕಾಲೇಜಿಗೆ ಬರಲು ಸಮಯಕ್ಕೆ ಬಸ್ ಇಲ್ಲ, ನೂರಾರು ಜನರಿದ್ದರೂ ಶಾಲೆಗೆ ಪ್ರತ್ಯೇಕ ಶೌಚಗೃಹವಿಲ್ಲ...

ಹೀಗೆ ಸಾಲು ಸಾಲು ಸಮಸ್ಯೆ, ಬೇಡಿಕೆಗಳು ಬಂದಿದ್ದು ನಗರದ ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ ಮಂಗಳವಾರ ಆಯೋಜಿಸಿದ್ದ ನಿಮ್ಮ ಹಕ್ಕು ನಮ್ಮ ಧ್ವನಿ ಮಕ್ಕಳ ಅಹವಾಲು ಸ್ವೀಕಾರ, ಸಂವಾದದಲ್ಲಿ ಕೇಳಿ ಬಂದವು. ಮಕ್ಕಳ ರP್ಷÀಣಾ ಆಯೋಗದ ಸದಸ್ಯೆ ಅಪರ್ಣಾ ಎಂ. ಕೊಳ್ಳಾ ಎದುರು ಹಲವು ಸಮಸ್ಯೆ, ಬೇಡಿಕೆಗಳು ಅನಾವರಣವಾದವು.

ಮೇನಲ್ಲಿ ತರಗತಿ ಪ್ರಾರಂಭವಾದರೂ ಹಾಸ್ಟೆಲ್‌ಗಳು ವಿದ್ಯಾರ್ಥಿಗಳ ಆಯ್ಕೆಪಟ್ಟಿ ಜುಲೈನಲ್ಲಿ ಪ್ರಕಟಿಸುತ್ತಿವೆ. ಹೀಗಾಗಿ, ವಿದ್ಯಾರ್ಥಿನಿಯರು ಹಾಸ್ಟೆಲï ಸಿಗದೆ ಇದ್ದುದಕ್ಕೆ ಶಿP್ಷÀಣವನ್ನೇ ಮೊಟಕುಗೊಳಿಸುವ ಸಾಧ್ಯತೆ ಇದೆ ಎಂದು ಉಪನ್ಯಾಸಕಿ ಪ್ರಭಾವತಿ ಗಮನಕ್ಕೆ ತಂದರು.

ಪ್ರೌಢಶಾಲೆಯ ವಿದ್ಯಾರ್ಥಿ ಪ್ರತೀಕ ಮಾತನಾಡಿ, ರಾಜಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ೧೫೦ ವಿದ್ಯಾರ್ಥಿಗಳಿದ್ದು, ಶೌಚಾಲಯ, ಗ್ರಂಥಾಲಯಕ್ಕೆ ಪ್ರತ್ಯೇಕ ಕೋಣೆ ಇಲ್ಲ. ಮೂರು ತರಗತಿಗಳು ಮಾತ್ರ ಇವೆ ಎಂದು ತಿಳಿಸಿದ.

ವಿದ್ಯಾರ್ಥಿನಿ ಶಿವಾನಿ ಮಾತನಾಡಿ, ಕಾಳಗಿ ತಾಲೂಕಿನ ಕಲಗುರ್ತಿಯಿಂದ ಬರುತ್ತಿದ್ದು ನಿತ್ಯ ಬೆಳಗ್ಗೆ ೮.೩೦ರಿಂದ ೯ಗಂಟೆ ಒಳಗೆ ಕಲಗುರ್ತಿಯಿಂದ ಕಲಬುರಗಿಗೆ ಬಸ ಸಂಚಾರ ಶುರು ಮಾಡಬೇಕು ಎಂದು ಒತ್ತಾಯಿಸಿದಳು. ಶಾಲಾ ವಿದ್ಯಾರ್ಥಿನಿ ನಂದಿತಾ ಮಾತನಾಡಿ, ನಮ್ಮ ಶಾಲೆಗೆ ಆಟದ ಮೈದಾನ ಹಾಗೂ ಶೌಚಗೃಹವಿಲ್ಲ ಎಂದಳು.

ಇದಕ್ಕೆ ಪ್ರತಿಕ್ರಿಯಿಸಿದ ಅಪರ್ಣಾ ಕೊಳ್ಳಾ, ಶೌಚಗೃಹ ಕೊರತೆ ಬಗ್ಗೆ ಮಾಹಿತಿ ನೀಡಲು ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ. ಕಟ್ಟಡಗಳ ಬಗ್ಗೆ ಸಂಬAಧಿಸಿದ ಇಲಾಖೆಗೆ ತಿಳಿಸಲಾಗುವುದು. ಬಸ್ ವ್ಯವಸ್ಥೆ ಇಲ್ಲದ ಕಡೆ ಬಸ್ ಸಂಚಾರ ಆರಂಭಿಸುವAತೆ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೆಕೆಆರ್‌ಟಿಸಿ ಅಧಿಕಾರಿ ಮಾತನಾಡಿ, ಬಸ್ ಸಂಚಾರ ಆರಂಭಿಸಲು ಪ್ರತಿ ವಾರ ವಿಭಾಗೀಯ ನಿಯಂತ್ರಣಾಧಿಕಾರಿಗಳು ಫೋನ್ ಇನ್ ಆಯೋಜಿಸಲಾಗುತ್ತಿದೆ. ಬೇಡಿಕೆ ಆಧರಿಸಿ ಬಸ್ ಕಲ್ಪಿಸಲಾಗುವುದು. ಬಸ್ ಸಕಾಲಕ್ಕೆ ಬರದಿದ್ದರೆ ೬೩೬೬೪ ೨೩೮೮೦ ಸಹಾಯವಾಣಿಗೆ ಕರೆ ಮಾಡಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net