ಶಾಲೆಗೆ ನೂತನ ಕಟ್ಟಡ ನಿರ್ಮಿಸಲು ಅನುದಾನಕ್ಕೆ ಗ್ರಾಮಸ್ಥರ ಮನವಿ

20 ckm 6
ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ಚಂಡಗೋಡು ಗ್ರಾಮಸ್ಥರು ವಿಪರೀತ ಮಳೆಯಿಂದ ಶಾಲಾ ಕಟ್ಟಡವು ಕುಸಿದಿರುವ ಕಾರಣ ನೂತನ ಕಟ್ಟಡ ನಿರ್ಮಿಸಲು ವಿಶೇಷ ಅನುದಾನ ಒದಗಿಸಿ ಮಕ್ಕಳ ಶ್ರೇಯೋಭಿವೃಧ್ದಿಗೆ ಶ್ರಮಿಸಬೇಕು ಎಂದು ಒತ್ತಾಯಿಸಿದರು.
Published on

ಚಿಕ್ಕಮಗಳೂರು: ವಿಪರೀತ ಮಳೆಯಿಂದ ಶಾಲಾ ಕಟ್ಟಡವು ಕುಸಿದಿರುವ ಕಾರಣ ನೂತನ ಕಟ್ಟಡ ನಿರ್ಮಿಸಲು ವಿಶೇಷ ಅನುದಾನ ಒದಗಿಸಿ ಮಕ್ಕಳ ಶ್ರೇಯೋಭಿವೃಧ್ದಿಗೆ ಶ್ರಮಿಸಬೇಕು ಎಂದು ಚಂಡಗೋಡು ಗ್ರಾಮಸ್ಥರು ಬಿಎಸ್ಪಿ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾ ಜ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ದೊಡ್ಡಮಾಗರವಳ್ಳಿ ಗ್ರಾಪಂ ವ್ಯಾಪ್ತಿಯ ಚಂಡಗೋಡು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಅತಿಯಾದ ಮಳೆಯಿಂದ ಶಿಥಿಲಾವಸ್ಥೆ ಹೆಚ್ಚಾಗಿ ಕುಸಿದಿರುವ ಕಾರಣ ವಿದ್ಯಾರ್ಥಿಗಳಿಗೆ ನೂತನ ಕಟ್ಟಡದ ಅವಶ್ಯಕತೆ ಬಹ ಳಷ್ಟಿದೆ ಎಂದು ಹೇಳಿದರು.

ಶಾಲೆಯ ನೂತನ ಕಟ್ಟಡ ನಿರ್ಮಿಸುವ ಸಂಬAಧ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವ, ಜಿಲ್ಲಾಧಿಕಾರಿ, ಶಾಸಕರು ಹಾಗೂ ಸಂಬAಧಿಸಿದ ಅಧಿಕಾರಿಗಳ ವೃಂದ ಚಂಡಗೋಡು ಗ್ರಾಮಕ್ಕೆ ಭೇಟಿ ಸಲ್ಲಿಸಿ ಪರಿಶೀಲನೆ ನಡೆಸಿ ಶಾಲೆಗೆ ೪೫ ಲಕ್ಷ ರೂ.ವೆಚ್ಚದಲ್ಲಿ ಮೂರು ಕೊಠಡಿಗಳನ್ನು ನಿರ್ಮಿಸಿಕೊಡುವ ಭರವಸೆ ವ್ಯಕ್ತಪಡಿಸಿದ್ದರು ಎಂದರು.

ಆದರೀಗ ಭರವಸೆ ನೀಡಿ ಅನೇಕ ತಿಂಗಳು ಕಳೆದರೂ ಇದುವರೆಗೂ ಶಾಲೆಯ ಹೊಸ ಕಟ್ಟಡವನ್ನು ನಿರ್ಮಿಸಲು ಅನುದಾನ ಬಿಡುಗಡೆಗೊಂಡಿಲ್ಲ. ಇದರಿಂದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗು ತ್ತಿದೆ. ಆ ನಿಟ್ಟಿನಲ್ಲಿ ನೂತನ ಶಾಲಾ ಕಟ್ಟಡವನ್ನು ನಿರ್ಮಿಸಲು ಅನುದಾನ ಒದಗಿಸಿ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ವಿಧಾನಸಭಾ ಕ್ಷೇತ್ರದ ಸಂಯೋಜಕ ಕೆ.ಆರ್.ಗಂಗಾಧರ್, ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್, ಉಪಾಧ್ಯಕ್ಷ ಕೆ.ಎಸ್.ಮಂಜುಳಾ, ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್, ಕಚೇರಿ ಕಾರ್ಯದರ್ಶಿ ಕಲಾವತಿ, ಚಂಡಗೋಡು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರವಿ, ಆಲ್ದೂರು ಹೋಬಳಿ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ವಸಂತ್‌ಕುಮಾರ್, ಲಕ್ಷö್ಮಣ್, ಗ್ರಾಮಸ್ಥರಾದ ಕೃಷ್ಣ, ರಘು, ಮಂಜುನಾಥ, ಕಲ್ಲೇಶ್, ಸೋಮಶೇಖರ್, ಶಿವಕುಮಾರ್, ಶಂಕರ್‌ಹುಣಸೆಮಕ್ಕಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net