ಶಾಲೆಗೆ ಆರ್ ಓ ಪ್ಲಾಂಟ್ ನೀಡಿದ ನೌಕರರು.

1643467814997
Published on

ವಿಜಯಪುರ: ತಮ್ಮ ತಾಂಡಾದಲ್ಲಿನ ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳು ಶುದ್ಧ ನೀರು ಕುಡಿಯುವಂತಾಗಬೇಕು ಎಂದು ಮದಭಾವಿ ತಾಂಡಾದ ಸರ್ಕಾರಿ ನೌಕರರೆಲ್ಲ ಸೇರಿ ತಮ್ಮೂರಿನ ಶಾಲೆಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ವಿಜಯಪುರ ತಾಲೂಕಿನ ಮದಭಾವಿ 1ನೇ ತಾಂಡಾದಲ್ಲಿರುವ ನಮ್ಮೂರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಯುವಿ ಫಿಲ್ಟರ್ ಹಾಗೂ ವಾಟರ್ ಕೂಲರ್(ಆರ್ ಓ ಪ್ಲಾಂಟ್) ಅನ್ನು ದೇಣಿಗೆ ನೀಡಲಾಯಿತು. ತಾಂಡಾದಲ್ಲಿ ಒಟ್ಟು 56ಜನ್ರು ಸರಕಾರಿ ನೌಕರರಿದ್ದು ತಲಾ 1500ರಂತೆ ಹಣ ಸೇರಿಸಿ 80 ಲೀಟರ್ ಸಂಗ್ರಹ ಸಾಮರ್ಥ್ಯವಿರುವ ಶುದ್ಧ ಕುಡಿಯುವ ನೀರಿನ ಯಂತ್ರ ನೀಡಿ, ತಮ್ಮ ತಾಂಡಾ ಮಕ್ಕಳಿಗೆ ಶುದ್ದ ಕುಡಿಯುವ ನೀರು ಸಿಗುವಂತೆ ಮಾಡಿದ್ದಾರೆ. ಇನ್ನು ಇದೇ ಮೊದಲೇನಲ್ಲದೆ ಈ ಹಿಂದೆಯೂ ಅನೇಕಬಾರಿ ಇಲ್ಲಿನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಈ ನೌಕರರು ಸಹಾಯ ಮಾಡಿದ್ದಾರೆ. ಎಲ್ಲ ಸರಕಾರಿ ನೌಕರರ ಪರವಾಗಿ ಜಯಸಿಂಗ ಚವ್ಹಾಣ, ಬಾಬು ಚವ್ಹಾಣ, ಅರವಿಂದ ರಾಠೋಡ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಶಾಲೆಗೆ ನೀಡಿದ್ರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಕಲಾವತಿ ಬಡಿಗೇರ, ಎಸ್ ಡಿ ಎಂ ಸಿ ಅಧ್ಯಕ್ಷ ಉತ್ತಮ ರಾಠೋಡ ಭಾಗಿಯಾಗಿದ್ರು. ಜೊತೆಗೆ ಗ್ರಾಮದ ಹಿರಿಯರಾದ ಬಾವಸಿಂಗ್ ರಾಠೋಡ, ಗುಜ್ಜು ಚವ್ಹಾಣ, ಖೀರು ರಾಠೋಡ, ಚೋಕಲು ರಾಠೋಡ, ನೀಲಕಂಠ ರಾಠೋಡ, ರಮೇಶ ರಾಠೋಡ, ಬಾಬು ರಾಠೋಡ ಸೇರಿದಂತೆ ಇತರರು ಸಾಥ್ ನೀಡಿದ್ರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net