ಶಾಲೆ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ

P PURA PRAJAA 22 (2)123
Published on

ಪರಶುರಾಮಪುರ: ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳು ಶಾಲೆಯಲ್ಲಿ ನಿಯಮಿತವಾಗಿ ಶಾಲಾ ಅಭಿವೃಧ್ದಿಗೆ ಶ್ರಮಿಸುವ ಜತೆ ಶಾಲೆಯಲ್ಲಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಚಿಕ್ಕಗೊಂಡನಹಳ್ಳಿ ಸಹಿಪ್ರಾ ಮಾದರಿ ಶಾಲೆಯ ಮುಖ್ಯಶಿಕ್ಷಕ ದಿನೇಶರೆಡ್ಡಿ ಹೇಳಿದರು.

ಚಿಕ್ಕಗೊಂಡನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲಾ ಸಂಸತ್ತು ಚುನಾವಣೆಗೆ ಮತದಾನ ನಡೆಸಲಾಯಿತು ಮತದಾನ ಪ್ರಕ್ರಿಯೆಯು ಆರು ಎಳು ಎಂಟನೇ ತರಗತಿಯ ಮಕ್ಕಳಿಂದ ಇವಿಎಂ ತಂತ್ರಜ್ಞಾನದ ಮೂಲಕ ನಡೆಸಲಾಯಿತು ಈ ವೇಳೆ ಮಾತನಾಡಿದರು.

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳ ಜತೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಲು ಶಾಲಾ ಸಂಸತ್ತು ಸಹಕಾರಿ ಎಂದರು
ಶಾಲೆಯ ಮೂವತ್ತಾರು ವಿದ್ಯಾರ್ಥಿಗಳು ಚುನಾವಣಾಚ ಕಣದಲ್ಲಿದ್ದು ಅದರಲ್ಲಿ ಹದಿನೆಂಟು ವಿದ್ಯಾರ್ಥಿಗಳು ಜಯಶೀಲರಾದರು ಅವರಿಗೆ ವಿವಿಧ ಖಾತೆಗಳನ್ನು ನೀಡಲಾಯಿತು.

ಅತೀ ಹೆಚ್ಚು ಮತಪಡೆದ ವಿದ್ಯಾರ್ಥಿ ಅಜಯ್ ಮುಖ್ಯಮಂತ್ರಿಯಾಗಿ ಉಲ್ಲಾಸ್ ಉಪ ಮುಖ್ಯಮಂತ್ರಿಯಾಗಿ ವಿರೋಧ ಪಕ್ಷದ ನಾಯಕಿಯಾಗಿ ಕುಮಾರಿ ಬಿಂದು ಆಯ್ಕೆಯಾದರು ಎಂದು ಶಾಲಾ ಮುಖ್ಯಶಿಕ್ಷಕ ದಿನೇಶರೆಡ್ಡಿ ಮತದಾನ ಪ್ರಕ್ರಿಯೆಯಲ್ಲಿ ಶಿಕ್ಷಕ ರುದ್ರಪ್ಪ, ಕೆ ರೇವಣ್ಣ, ಕೆ ಸುದರ್ಶನ, ಅರುಣ್‌ಕುಮಾರ, ಅಪ್ಪಣ್ಣಸ್ವಾಮಿ, ಆನಂದಮೂರ್ತಿ, ಶಿಕ್ಷಕಿಯರಾದ ವಿಜಯಲಕ್ಷ್ಮೀ, ಸುವರ್ಣಮ್ಮ, ಕುಸುಮಾ, ರೀಟಾವಾಣಿ, ವೀಣಾ ಶಾಲಾ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net