ಶಾಲೆ-ಕಾಲೇಜುಗಳಲ್ಲಿ ಜಯಂತಿ ಆಚರಿಸಿ

28 KAMPLI 03
Published on

ಕಂಪ್ಲಿ: ತಾಲೂಕು ಆಡಳಿತದಿಂದ ಏ.2ರಂದು ಬೆಳಗ್ಗೆ 10.30ಕ್ಕೆ ದೇವರ ದಾಸಿಮಯ್ಯ ಹಾಗೂ ಏ.10ರಂದು ಮಹಾವೀರ ಜಯಂತ್ಯುತ್ಸವವನ್ನು ತಾಲೂಕು ಆಡಳಿತದಿಂದ ಸರಳವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಎಸ್.ಶಿವರಾಜ ತಿಳಿಸಿದರು.

ತಹಸಿಲ್ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಗುರುವಾರ ಮಾತನಾಡಿದರು. ಸರ್ಕಾರಿ ಕಚೇರಿ, ಶಾಲೆ-ಕಾಲೇಜುಗಳಲ್ಲಿ ಜಯಂತ್ಯುತ್ಸವ ಆಚರಿಸಿ ವರದಿ ನೀಡಬೇಕೆಂದು ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ದೇವಾಂಗ ಸಮಾಜದ ಸ್ಥಳೀಯ ಘಟಕದ ಅಧ್ಯಕ್ಷ ಸಪ್ಪರದ ರಾಘವೇಂದ್ರ ಮಾತನಾಡಿ, ಅಂದು ಬೆಳಗ್ಗೆ ಬಣ್ಣದ ಚೌಡೇಶ್ವರಿ ದೇವಸ್ಥಾನದಲ್ಲಿ ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತ್ಯುತ್ಸವ ಆಚರಿಸಲಾಗುವುದು ಎಂದು ತಿಳಿಸಿದರು.

ದೇವಾಂಗ ಮಠದ ಮಂಜುನಾಥ, ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಪಿ.ಬ್ರಹ್ಮಯ್ಯ, ಕಾರ್ಯದರ್ಶಿ ಜಿ.ಸುಧಾಕರ, ದೇವಾಂಗ ಸಮಾಜದ ಪದಾಧಿಕಾರಿಗಳಾದ ಗದ್ಗಿ ವಿರೂಪಾಕ್ಷಿ, ವಣಕಿ ಶಂಕರ್, ದೂಪದ ಪ್ರಶಾಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net