ಶಾಲೆ ಉಳಿಸಿ ಹೋರಾಟ ಒಕ್ಕೂಟದಿಂದ ಪ್ರತಿಭಟನೆ

Published on

ಮೈಸೂರು: ವಿವೇಕ ಸ್ಮಾರಕ ಜಾಗದಲ್ಲಿ ಎನ್‌ಟಿಎಂ ಶಾಲೆ ಮರುನಿರ್ಮಾಣಕ್ಕೆ ಒತ್ತಾಯಿಸಿ ಮಹಾರಾಣಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ (ಮೆಟ್ರೋಪೋಲ್) ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿದ ವಿವಿಧ ಸಂಘಟನೆ ಮುಖಂಡರು, ವಿವೇಕ ಸ್ಮಾರಕ ಜಾಗದಲ್ಲಿ ಶಾಲೆ ನಿರ್ಮಿಸುವುದಾಗಿ ರಾಮಕೃಷ್ಣ ಆಶ್ರಮದವರು ತಿಳಿಸಿದ್ದು, ಅದರಂತೆ ಶಾಲೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಮೇಯರ್ ಪುರುಷೋತ್ತಮ್, ಒಕ್ಕೂಟದ ಸಂಚಾಲಕ ಎಂ.ಮೋಹನ್‌ಕುಮಾರ್ ಗೌಡ, ಮುಖಂಡರಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಎಸ್.ಬಾಲಕೃಷ್ಣ, ಸುನಿಲ್‌ಕುಮಾರ್, ಜೆ.ಉಮೇಶ್, ರಾಜ್‌ಕಿಶೋರ್, ಯೋಗೇಶ, ಗೋವಿಂದರಾಜ್, ರವೀಂದ್ರ, ನಾಗರಾಜು, ರವಿಗೌಡ, ಬಿ.ಮಹದೇವ, ಈಶ್ವರ, ಕೃಷ್ಣ, ಗಿರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net