ಶಾಲಾಭಿವೃದ್ಧಿಗೆ ಮುಖ್ಯ ಶಿಕ್ಷಕಿಯಿಂದಲೇ ನೆರವು

29hos2p t.g.kshama
ಸಂಪೆಕಟ್ಟೆ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ ಟಿ.ಜಿ.ಕ್ಷಮಾ ಅವರು 1 ಲಕ್ಷ ರೂ. ಚೆಕ್ಕನ್ನು ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
Published on

ಹೊಸನಗರ: ತಾಲೂಕಿನ ಸಂಪೆಕಟ್ಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಟಿ.ಜಿ.ಕ್ಷಮಾ ತಾವು ಕಾರ್ಯ ನಿರ್ವಹಿಸುತ್ತಿರುವ ಶಾಲೆಯ ಅಭಿವೃದ್ಧಿಗೆ 1 ಲಕ್ಷ ರೂ. ದೇಣಿಗೆಯಾಗಿ ನೀಡಿದ್ದಾರೆ. ಚೆಕ್ ಸ್ವೀಕರಿಸಿ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಶಾಲಾಭಿವೃದ್ಧಿಗಾಗಿ ಶಾಲೆಯ ಮುಖ್ಯ ಶಿಕ್ಷಕರೇ 1 ಲಕ್ಷ ರೂ. ದೇಣಿಗೆ ನೀಡಿರುವುದು ವಿಶೇಷ. ಅವರ ಸಂಬಳದಲ್ಲಿ ಹಣ ನೀಡಿರುವುದು ಸರ್ಕಾರಿ ಶಾಲೆಯ ಬಗ್ಗೆ ಅವರ ಕಾಳಜಿ ವ್ಯಕ್ತಪಡಿಸುತ್ತದೆ. ಇಂತಹ ಮುಖ್ಯಶಿಕ್ಷಕಿ ನಮ್ಮ ಊರಿನ ಹೆಮ್ಮೆ ಎಂದು ಶ್ಲಾಸಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 1ಲಕ್ಷ ರೂ. ಚೆಕ್‌ನ್ನು ಸಮಿತಿಗೆ ಹಸ್ತಾಂತರಿಸಿದರು. ಈ ವೇಳೆ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಊರಿನ ಪ್ರಮುಖರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net