ಶಾಲಾಬಸ್ ಉರುಳಿ ವಿದ್ಯಾರ್ಥಿಗಳಿಗೆ ಗಾಯ

CTD -0002
Published on

ಚಿತ್ರದುರ್ಗ:ಹೊಸದುರ್ಗ ತಾಲೂಕು ಮಲ್ಲಪ್ಪನಹಳ್ಳಿಯಲ್ಲಿ ಸರ್ಕಾರಿ ಶಾಲಾ ಬಸ್ ಉರುಳಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯ ಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಮಕ್ಕಳನ್ನು ಶಾಲೆಗೆ ಕರೆ ತರುವ ವೇಳೆ ಅಪಘಾತಕ್ಕೆ ಈಡಾಗಿದೆ. ಮಾರ್ಗ ಮಧ್ಯದ ಗುಂಡಿ ತಪ್ಪಿಸಲು ಹೋಗಿ ಶಾಲಾ ಬಸ್ ರಸ್ತೆ ಪಕ್ಕಕ್ಕೆ ಉರುಳಿದೆ. ಗಾಯಾಳು ವಿದ್ಯಾರ್ಥಿಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾ ಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net