ಶಾಲಾ ವಾಹನಗಳ ಮೇಲೆ ನಿಗಾ ವಹಿಸಲು ಎಂಎಲ್ ಸಿ ಮಂಜೇಗೌಡ ಒತ್ತಾಯ

cn manjegowda
Published on

ಮೈಸೂರು: ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ವಾಹನಗಳ ಮೇಲೆ ಪೊಲೀಸರು ನಿಗಾ ವಹಿಸಿ ಸುರಕ್ಷತೆ ಬಗ್ಗೆ ಚಾಲಕರಿಗೆ ಸಲಹೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ತಿಳಿಸಿದರು.
ಕೆಲವು ಮಾರುತಿ ವ್ಯಾನ್, ಆಟೋಗಳಲ್ಲಿ ಮಕ್ಕಳನ್ನು ಮಿತಿ ಮೀರಿ ಕುರಿ ಮಂದೆಯಂತೆ ತುಂಬಿಕೊಂಡು ವೇಗವಾಗಿ ಹೋಗುತ್ತಾರೆ. ಈ ವೇಳೆ ವಾಹನದ ಮೇಲಿನ ಬ್ಯಾಗ್‌ಗಳು ಕೆಳಗೆ ಬಿದ್ದಿವೆ. ಅಪಘಾತಗಳು ಆಗುತ್ತಿವೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಮಕ್ಕಳು ಈ ದೇಶದ ಸಂಪತ್ತು. ಅವರನ್ನು ಜೋಪಾನವಾಗಿ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದ್ದರಿಂದ, ಪೊಲೀಸರು ಎಲ್ಲ ಶಾಲೆಗಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಚಾಲಕರಿಗೆ, ಶಾಲೆಯ ಮುಖ್ಯಸ್ಥರಿಗೆ, ಪಾಲಕರಿಗೆ ಸೂಕ್ತ ಸಲಹೆ, ಸೂಚನೆ ನೀಡುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net