

ಚಿತ್ರದುರ್ಗ: ಖಾಸಗಿ ಶಾಲಾ ವಾಹನಗಳಲ್ಲಿ ನೇಮಿಸಿರುವ ಸಿಬ್ಬಂದಿ ವಿವರ ಹಾಗೂ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಿರುವ ಕುರಿತು ತಮ್ಮ ಇ ಲಾಖೆಗೆ ಮಾಹಿತಿ ನೀಡಬೇಕೆಂದು ಆರ್‌ಟಿಒ ಭರತ್ ಎಂ.ಕಾಳಿಸಿಂಗೆ ಹೇಳಿದರು.
ನಗರದ ಎಸ್‌ಆರ್‌ಎಸ್ ಪಿಯು ಕಾಲೇಜಿನಲ್ಲಿ ಗುರು ವಾರ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಅಂಗವಾಗಿ ಆಯೋಜಿ ಸಿದ್ದ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು,ಜಿಲ್ಲಾಧಿಕಾರಿ ಆದೇಶದನ್ವಯ ಶಾಲಾ ವಾಹನಗಳು,ಸಿಬ್ಬಂದಿ ವಿವರ ಹಾಗೂ ಮಹಿಳಾ ಸಹಾ ಯಕಿಯರ ನಿಯೋಜನೆ ಮಾಹಿತಿಯನ್ನು ಕಡ್ಡಾಯವಾಗಿ ಕೊಡಬೇಕು.
ನೋಂದಣಿಯಾಗಿ 15 ವರ್ಷ ಮೀರಿದ ವಾಹನಗಳನ್ನು ಓಡಿಸುವಂತಿಲ್ಲ ಎಂಬುದನ್ನು ಖಾಸಗಿ ಶಾಲಾ-ಕಾಲೇಜು ಸಂಸ್ಥೆಗಳು ಗಮ ನಿಸಬೇಕು. 18 ವರ್ಷ ವಯಸ್ಸು ಮೀರದೆ,ಬೈಕ್,ಕಾರು ಇತ್ಯಾದಿ ವಾಹನಗಳನ್ನು ವಿದ್ಯಾರ್ಥಿಗಳು ಚಾಲನೆ ಮಾಡಬಾರದು. ಇದನ್ನು ಉ ಲ್ಲಂಘಿಸಿದರೆ ದಂಡನಾರ್ಹ ಅಪರಾಧವಾಗುತ್ತದೆ ಎಂದು ವಿದಾರ್ಥಿಗಳನ್ನು ಎಚ್ಚರಿಸಿದರು.
ಇಲಾಖೆಯಿಂದ ಇಂಧನ ಬಳಕೆ ವಾಹನಗಳಿಂದ ವಾತಾವರಣದ ಮೇಲಾಗುವ ದುಷ್ಪರಿಣಾಮ ಹಾಗೂ ನಿಯಂತ್ರಣ ಕುರಿತಂತೆ ಜಾ ಗೃತಿ ಮೂಡಿಸಲಾಗುವುದು. ಈ ನಿಟ್ಟಿನಲ್ಲಿ ಒಂದು ತಿಂಗಳು ಇಲಾಖೆಯಿಂದ ವಿವಿಧೆಡೆ ನಾನಾ ಜಾಗೃತಿ ಕಾರ‌್ಯಕ್ರಮಗಳನ್ನು ಹಮ್ಮಿಕೊಳ್ಳಲಾ ಗುವುದು ಎಂದರು.
ಡಿವೈಎಸ್‌ಪಿ ಪಿ.ಕೆ.ದಿನಕರ್,ಪ.ಪೂ.ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ,ಡಿಡಿಪಿಐ ಎಂ.ಆರ್.ಮಂಜುನಾಥ್,ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ,ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ.ರವಿ,ಬಿಆರ್‌ಸಿ ಸಂಪತ್‌ಕುಮಾರ್,ಬಿಇಒಗಳಾದ ಶ್ರೀನಿ ವಾಸ್,ಸೈಯದ್‌ಮೋಸಿನ್ ಮತ್ತಿತರರು ಇದ್ದರು.