ಶಾಲಾ ವಾಹನ ಹರಿದು ಬಾಲಕಿ ಸಾವು

Crime Logo
Published on

ಚಾಮರಾಜನಗರ : ಕಾನ್ವೆಂಟ್ ವ್ಯಾನ್ ರಿವರ್ಸ್ ತೆಗೆಯುವಾಗ ಬಾಲಕಿ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ತಾಲೂಕಿನ ಕೊಡೆಸೋಗೆ ಗ್ರಾಮದ ನಿವಾಸಿಗಳಾದ ಮಹದೇವಸ್ವಾಮಿ ಮತ್ತು ಸುಷ್ಮಿತಾ ದಂಪತಿ ಪುತ್ರಿ ಅನ್ವಿತಾ(4) ಮೃತ ಬಾಲಕಿ. ಈಕೆ ಉಡಿಗಾಲ ಗ್ರಾಮದ ನಿವಾಸಿಯಾದ ಶೇಖರ್ ಅವರ ಮನೆಯಲ್ಲಿ ವಿದ್ಯಾಭ್ಯಾಸದ ದೃಷ್ಟಿಯಿಂದ ನೆಲೆಸಿದ್ದಳು. ಉಡಿಗಾಲ ಗ್ರಾಮದ ಉಗನೇದಹುಂಡಿ ರಸ್ತೆಯಲ್ಲಿರುವ ಚಂದನ ಕಾನ್ವೆಂಟ್‌ನಿಂದ ಎಂದಿನಂತೆ ಗುರುವಾರ ಸಂಜೆ ಶಾಲೆ ಮುಗಿಸಿಕೊಂಡು ಸ್ಕೂಲ್ ವ್ಯಾನ್‌ನಲ್ಲಿ ಬಂದಿಳಿದಿದ್ದಾಳೆ. ಈ ವೇಳೆ ಎದುರಿಗೆ ಕಾರು ಬಂದಿದ್ದರಿಂದ ವ್ಯಾನ್ ಅನ್ನು ರಿವರ್ಸ್ ತೆಗೆಯುವಾಗ ವ್ಯಾನ್ ಚಕ್ರಕ್ಕೆ ವಿದ್ಯಾರ್ಥಿನಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಯ್ಯ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಗುವಿನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net