

ಆಲ್ದೂರು: ಸಂಚಾರ ಕಾನೂನು ಸುವ್ಯವಸ್ಥೆ ಅಡಿ ಆಲ್ದೂರು ಠಾಣಾ ವ್ಯಾಪ್ತಿಯ ಶಾಲಾ ವಾಹನಗಳ ಚಾಲಕರು ಹಾಗೂ ಮಾಲೀಕರ ಸಭೆಯನ್ನು ಪಿಎಸ್‌ಐ ಅಕ್ಷ್ಷಿತಾ ಶುಕ್ರವಾರ ನಡೆಸಿ ಮಾರ್ಗದರ್ಶನ ನೀಡಿದರು.
ಶಾಲಾ ಮಕ್ಕಳ ವಾಹನ ಚಾಲಕರು ಜಾಗರೂಕರಾಗಿ ವಾಹನ ಚಾಲನೆ ಮಾಡಬೇಕು. ಮಿತಿ ಮೀರಿ ಶಾಲಾ ಮಕ್ಕಳನ್ನು ವಾಹನಗಳಲ್ಲಿ ಕೂರಿಸಬಾರದು. ಮಕ್ಕಳ ಸುರಕ್ಷತೆ ಮುಖ್ಯ. ಸಂಚಾರ ನಿಯಮ ತಪ್ಪದೆ ಪಾಲಿಸಬೇಕು ಎಂದು ಸಲಹೆ ನೀಡಿದರು.