ಶಾಲಾ ರಜೆ ಕಡಿತ ಪರಿಶೀಲಿಸಿ

Govt High School Teachers Sangh Memorandum To Education Minister
Published on

ಬೀದರ್: ಪ್ರೌಢಶಾಲೆಗಳ ದಸರಾ ರಜೆಗಳನ್ನು ಕಡಿತಗೊಳಿಸಿರುವ ಕ್ರಮವನ್ನು ರಾಜ್ಯ ಸರ್ಕಾರ ಪುನರ್ ಪರಿಶೀಲಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಒತ್ತಾಯಿಸಿದ್ದಾರೆ.
ಔರಾದ್‍ಗೆ ಸೋಮವಾರ ಭೇಟಿ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು. ದಸರಾ ರಜೆಗಳನ್ನು 29 ದಿನಗಳಿಂದ 14 ದಿನಗಳಿಗೆ ಕಡಿತಗೊಳಿಸಿರುವುದು ಅವೈಜ್ಞಾನಿಕ. ಮೊದಲಿನ ರಜೆ ಅವಧಿಯನ್ನೇ ಮುಂದುವರಿಸಿ ಶಿಕ್ಷಕರು ಹಾಗೂ ಮಕ್ಕಳ ಒತ್ತಡ ರಹಿತ ಕಲಿಕೆಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಹಿಂದೆ 225 ರಿಂದ 230 ದಿನ ಶಾಲೆಗಳು ನಡೆಯುತ್ತಿದ್ದವು. ಈಗ 260 ಕ್ಕೂ ಹೆಚ್ಚು ದಿನ ಶಾಲೆಗಳು ನಡೆಯುತ್ತಿವೆ. ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ 10 ದಿನ ಮಾತ್ರ ಗಳಿಕೆ ರಜೆ ನೀಡಲಾಗುತ್ತಿದೆ. ಆದರೆ,  ರಜೆ ರಹಿತ ಇಲಾಖೆಗಳ ಸಿಬ್ಬಂದಿಗೆ 30 ದಿನಗಳ ಗಳಿಕೆ ರಜೆ ಕೊಡಲಾಗುತ್ತಿದೆ ಎಂದು ಶಿಕ್ಷಣ ಸಚಿವರ ಗಮನ ಸೆಳೆದರು. ಬಲವಂತರಾವ್ ರಾಠೋಡ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net