ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

nrp uniform
ಎನ್.ಆರ್.ಪುರ ತಾಲೂಕಿನ ದಾವಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಗುತ್ತಿಗೆದಾರ ಸುಧಾಕರ್ ಸಮವಸ್ತ್ರ ವಿತರಿಸಿದರು. ಕೆ.ಶರತ್‌ಕುಮಾರ್, ಸಿ.ಮಧುಸೂದನ್, ದೀಪ್ತಿ, ಸಿಂಚನಾ, ತ್ರಿಪುರಾಂಭಾ ಇದ್ದರು.
Published on

ಎನ್.ಆರ್.ಪುರ: ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಪ್ರತಿ ವರ್ಷ ಒಂದು ಶಾಲೆ ಮಕ್ಕಳಿಗೆ ಸಮವಸ್ತ್ರ ವಿತರಿಸುತ್ತಿದ್ದೇನೆ ಎಂದು ಶಾಂತಿಭವನದ ಗುತ್ತಿಗೆದಾರ ಸುಧಾಕರ್ ತಿಳಿಸಿದರು.

ಸೋಮವಾರ ದಾವಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ 20 ಸಾವಿರ ರೂಪಾಯಿ ಮೌಲ್ಯದ ಸಮವಸ್ತ್ರ ವಿತರಿಸಿ ಮಾತನಾಡಿ, ಸಮವಸ್ತ್ರ ವಿತರಣೆಯಿಂದ ಬಹಳಷ್ಟು ಮಕ್ಕಳ ಪಾಲಕರಿಗೆ ಆರ್ಥಿಕ ಹೊರೆ ತಪ್ಪಲಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಕೆ.ಶರತ್‌ಕುಮಾರ್ ಮಾತನಾಡಿ, ದಾನಿಗಳು ಶಾಲಾ ಮಕ್ಕಳಿಗೆ ಸೌಕರ್ಯ ಒದಗಿಸಿಕೊಟ್ಟರೆ ಬಡ ಮಕ್ಕಳಿಗೆ ಶಿಕ್ಷಣ ಕಲಿಯಲು ಅನುಕೂಲವಾಗುತ್ತದೆ. ಎಲ್ಲ ಶಾಲೆಗಳ ಮೂಲಭೂತ ಸೌಕರ್ಯಕ್ಕೂ ದಾನಿಗಳು ಕೈ ಜೋಡಿಸಬೇಕು ಎಂದರು. ಮುಖ್ಯಶಿಕ್ಷಕ ಸಿ.ಮಧುಸೂದನ್, ಸಹ ಶಿಕ್ಷಕಿಯರಾದ ದೀಪ್ತಿ, ಸಿಂಚನಾ, ಅಂಗನವಾಡಿ ಕಾರ್ಯಕರ್ತೆ ತ್ರಿಪುರಾಂಭಾ, ಎಸ್‌ಡಿಎಂಸಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net