ಶಾಲಾ ಮಂತ್ರಿಮಂಡಲ ರಚನೆ

03-GPT-2
Published on

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ನಡೆಸಲಾಯಿತು.


ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಬಳಕೆ ಮಾಡದೆ ಮೊಬೈಲ್ ಬಳಸಿ ಎಲೆಕ್ಟ್ರಾನಿಕ್ ಮತಯಂತ್ರ ರೀತಿಯಲ್ಲಿ ನಡೆಸಿದ್ದು ವಿಶೇಷವಾಗಿತ್ತು. ಮೊಬೈಲ್ ಆ್ಯಪ್‌ನಲ್ಲಿ ಚುನಾವಣೆ ನಡೆಸಿ ಮಧ್ಯಾಹ್ನ 3 ಗಂಟೆಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ ವಿಜೇತರನ್ನು ಘೋಷಿಸಲಾಯಿತು. ನಂತರ ಶಾಲಾ ಮಂತ್ರಿಮಂಡಲ ರಚಿಸಲಾಯಿತು. ಮಕ್ಕಳಿಗೆ ಚುನಾವಣೆ ಪ್ರಕ್ರಿಯೆ ಅಲ್ಲದೆ ಎಲೆಕ್ಟ್ರಾನಿಕ್ ಮತಚಲಾವಣೆ ಮಾಡಿದ್ದು ಹೊಸ ಅನುಭವ ನೀಡಿತು.

ಪ್ರಾಂಶುಪಾಲ ಮಹದೇವ ಪ್ರಸಾದ್, ಶಿಕ್ಷಕರಾದ ನಂಜುಂಡಸ್ವಾಮಿ, ಮಂಜುನಾಥ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net