

ಚಿತ್ರದುರ್ಗ: ಶಾಲೆ ಅಗತ್ಯತೆ ಮತ್ತು ಮಗುವಿನ ಕಲಿಕೆಯಲ್ಲಿರುವ ಸವಾಲುಗಳನ್ನು ಗುರುತಿಸಿ ಮಾರ್ಗದರ್ಶನ ನೀಡಬೇಕೆಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್‌ನಲ್ಲಿ ಜಿಲ್ಲೆ ಶೈಕ್ಷಣಿಕ ಚಟುವಟಿಕೆಗಳ ಅನುಷ್ಠಾನಾಧಿಕಾರಿಗಳಿಗೆ ಶಾಲಾ ಭೇಟಿ ಮತ್ತು ಬೆಂಬಲ ವ್ಯವಸ್ಥೆ ಕುರಿತು ಸೋಮವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು,ಶಾಲಾ ಭೇಟಿಗಳು ಪರಿಣಾಮಕಾರಿಯಾಗಿರಬೇಕು. ಶಿಕ್ಷಕರ ಬೋಧನೆ, ಮಕ್ಕಳ ಕಲಿಕೆ ಪರಿಶೀಲಿಸುವ ಸಂದರ್ಭ ಧನಾತ್ಮಕ ಅಂಶಗಳನ್ನು ಗುರುತಿಸಿ ಸಲಹೆ ನೀಡಬೇಕೆಂದರು.
ಹಿರಿಯ ಉಪನ್ಯಾಸಕ ಎಸ್.ಜ್ಞಾನೇಶ್ವರ ಮಾತನಾಡಿ,ಅನುಷ್ಠಾನಾಧಿಕಾರಿಗಳು ಶಾಲೆ ಮತ್ತು ಶಿಕ್ಷಕರಿಗೆ ನೀಡಿದ ಬೆಂಬಲ ಕುರಿತು ಚರ್ಚಿಸಲು ಪ್ರತಿ ತಿಂಗಳ 2ನೇ ಕಾರ‌್ಯದಿನ ಶಾಲಾ ಹಂತ,8ನೇ ಕಾರ‌್ಯದಿನ ಕ್ಲಸ್ಟರ್‌ಹಂತ, ಹಾಗೂ 10ನೇ ಕಾರ‌್ಯದಿನದಂದು ಬ್ಲಾಕ್ ಹಂತದಲ್ಲಿ ಸಭೆ ನಡೆಸಿ ಪ್ರಗತಿ ಪರಿಶೀಲಿಸ ಬೇಕೆಂದರು.
ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ,ಶಿಕ್ಷಕರು ಮತ್ತು ಅನುಷ್ಠಾನ ಅಧಿಕಾರಿಗಳು ಅಧ್ಯಯನ,ಅಧ್ಯಾಪನ,ಸಂಶೋಧನಾ ಗುಣ ಮೈ ಗೂಡಿಸಿಕೊಳ್ಳಬೇಕು. ಕಲಿಕಾ ಫಲಗಳು ಮತ್ತು ಪೂರ್ವ ಪರೀಕ್ಷೆ,ಸಾಫಲ್ಯಪರೀಕ್ಷೆ,ತರಬೇತಿಗಳ ಅನುಷ್ಠಾನ,ಶಾಲೆಯಲ್ಲಿನ ನಾವಿನ್ಯಯುತ ಅಭ್ಯಾ ಸಗಳು ,ತರಗತಿ ಪ್ರಕ್ರಿಯೆ,ವಿಷಯವಾರು ಕ್ಲಬ್‌ಗಳ ರಚನೆ ಇತ್ಯಾದಿ ಮಾನದಂಡಗಳ ಆಧಾರದ ಮೇಲೆ ಸಿಆರ್‌ಪಿಗಳು ಶಾಲೆಗಳನ್ನು ಗ್ರೇಡಿಂ ಗ್ ಮಾಡಿ ದತ್ತು ಶಾಲೆಗಳನ್ನು ಹಂಚಿಕೆ ಮಾಡ ಬೇಕೆಂದರು.
ಹಿರಿಯ ಉಪನ್ಯಾಸಕ ಎಸ್.ಸಿ.ಪ್ರಸಾದ್,ಉಪನ್ಯಾಸಕರಾದ ಕೆ.ಜಿ.ಪ್ರಶಾಂತ್,ಕನಕಮ್ಮ,ಶಿವಲೀಲಾ,ಎನ್.ರಾಘವೇಂದ್ರ,ಎನ್.ಮಂಜುನಾಥ್, ಕರ್ನಾಟಕ ಮಾದರಿ ಶಾಲಾ ಮಾರ್ಗದರ್ಶಿ ಕಾರ‌್ಯಕ್ರಮ ಜಿಲ್ಲಾ ನೋಡಲ್ ಅಧಿಕಾರಿ ಕುಮಾರ್, ಜಿಲ್ಲೆಯ ಸಿಆರ್‌ಪಿ,ಬಿಆರ್‌ಪಿ ಮತ್ತು ಶಿಕ್ಷಣ ಸಂಯೋಜಕರು ಇದ್ದರು.