ಶಾಲಾ ಪೂರ್ವ ಶಿಕ್ಷಣ ಮಗುವಿನ ಭವಿಷ್ಯದ ಭದ್ರ ಬುನಾದಿ:ಡಾ. ನಹಿದಾ ಅಭಿಪ್ರಾಯ

IMG-20250303-WA0014
Published on

ಶಾಲಾ ಪೂರ್ವ ಶಿಕ್ಷಣ ಮಗುವಿನ ಭವಿಷ್ಯದ ಭದ್ರ ಬುನಾದಿ:ಡಾ. ನಹಿದಾ ಅಭಿಪ್ರಾಯ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಶಾಲಾ ಪೂರ್ವ ಶಿಕ್ಷಣ ಮಗುವಿನ ಭವಿಷ್ಯದ ಭದ್ರ ಬುನಾದಿಯಾಗಿದ್ದು, ಈ ವ್ಯವಸ್ಥೆಯಲ್ಲಿ ಔಪಚಾರಿಕ ಶಿಕ್ಷಣಕ್ಕೆ ಒಳ ಪಡುವ ಮುನ್ನವೇ ಮಗುವನ್ನು ಶಾಲೆಗೆ ತೆರಳಲು ಮಾನಸಿಕವಾಗಿ ಬೌದ್ಧಿಕವಾಗಿ ಸಿದ್ದಗೊಳಿಸಬೇಕು ಎಂದು ಶೇಖ್ ಹೋಮಿಯೊಪಥಿಕ್ ಮೆಡಿಕಲ್‌ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ನಹಿದಾ ಹೇಳಿದರು.

ನಗರದ ಶೇಖ ಸೆಂಟ್ರಲ್ ಸ್ಕೂಲ್ ನಲ್ಲಿ ಈಚೆಗೆ ನಡೆದ ಶಾಲಾ ಪೂರ್ವ ಪದವಿ ಎಂಬ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ಸಂಸ್ಥೆಯ ಬಿಸಿಎ ಕಾಲೇಜಿನ ಪ್ರಾಚಾರ್ಯ ರೂಪಾ ಸಕ್ರಿ ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಶಾಲಾ ಪೂರ್ವ ಶಿಕ್ಷಣ,ಎಲ್‌ ಕೆಜಿ.ಯುಕೆಜಿ ಹಂತದಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದರೆ ಅದು ಅವರ ಜೀವಮಾನದಲ್ಲಿ ಸಹಕಾರಿಯಾಗುತ್ತದೆ ಎಂದರು.

ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ನಂತರ ಬಹುಮಾನ ವಿತರಿಸಲಾಯಿತು.

ಶಿಕ್ಷಕಿ ಆಯೇಷಾ ದೇಸಾಯಿ ಪ್ರೀತಿ,ಶೀಲಾ,ಅಲ್ತಾಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net