ಶಾಲಾ ಕೊಠಡಿನಿರ್ಮಾಣಕ್ಕೆ ಆದ್ಯತೆ

31 yelandur 01
Published on

ಯಳಂದೂರು: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವೇಕ ಯೋಜನೆಯೂ ಸೇರಿದಂತೆ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 10 ಕೋಟಿ ರೂ.ಅನುದಾನ ವಿನಿಯೋಗಿಸಲಾಗಿದೆ ಎಂದು ಶಾಸಕ ಎನ್.ಮಹೇಶ್ ಹೇಳಿದರು.
ತಾಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಲಿಕಾಹಬ್ಬ ಮತ್ತು ಶಾಲಾ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು ಶಿಕ್ಷಣ ಸಚಿವನಾಗಿದ್ದ ಸಮಯದಲ್ಲಿ ಕ್ಷೇತ್ರಕ್ಕೆ ವಿಶೇಷವಾಗಿ 8 ಕೋಟಿ ರೂ.ಅನುದಾನವನ್ನು ನೀಡಿದ್ದೆ. ಈಗ ನೂತನವಾಗಿ ವಿವೇಕ ಯೋಜನೆಯಡಿ 100 ಶಾಲಾ ಕೊಠಡಿಗಳ ನಿರ್ಮಾಣವಾಗುತ್ತಿದೆ. ಇದರಲ್ಲಿ 35 ಕಾಮಗಾರಿಗಳು ಪ್ರಗತಿಯಲ್ಲಿದೆ. ಈ ಸೇವೆ ಸಾರ್ಥಕತೆ ನೀಡಿದೆ ಎಂದರು.
ಹೊಸ ಶಿಕ್ಷಣ ನೀತಿಯಿಂದ ಮಕ್ಕಳು ಸೃಜನಶೀಲತೆ ರೂಢಿಸಿಕೊಳ್ಳಲು ಅನುಕೂಲವಾಗಿದೆ. ವಿದ್ಯಾರ್ಥಿಗಳೇ ಶಿಕ್ಷಕರನ್ನು ಕಲಿಕೆಗೆ ಹಚ್ಚುವುದು ಹೊಸ ಶಿಕ್ಷಣ ನೀತಿಯ ಭಾಗವಾಗಿದೆ. ಮಗುವಿನ ಅಂತರಾಳದ ಚೈತನ್ಯವನ್ನು ಹೊರತೆಗೆಯುವುದೆ ನಿಜವಾದ ಶಿಕ್ಷಣ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ನಿರ್ಮಿತಿ ಕೇಂದ್ರ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ನಿರ್ಮಾಣಗೊಂಡಿರುವ 2 ಕೊಠಡಿಗಳನ್ನು ಉದ್ಘಾಟಿಸಲಾಯಿತು. ಶಾಲಾ ಮಕ್ಕಳು ವಿವಿಧ ವೇಷಭೂಷಣಗಳನ್ನು ತೊಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಸಂಜೆ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಉರಿಲಿಂಗಪೆದ್ದಿ ನಾಟಕ ಪ್ರದರ್ಶಿಸಿದರು.
ಮುಖ್ಯ ಶಿಕ್ಷಕ ವೀರಭದ್ರಸ್ವಾಮಿ, ಗ್ರಾಪಂ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷೆ ನಾಗು ರಾಚಪ್ಪ, ಸದಸ್ಯರಾದ ಚಂದ್ರಶೇಖರ್, ಮಂಜುಳಾ, ರಾಜೇಂದ್ರ, ಶ್ರೀನಿವಾಸ್, ನಂಜನಾಯಕ, ಶೋಭಾ, ಶಕುಂತಲಾ, ರಾಚಶೆಟ್ಟಿ, ಭಾಗ್ಯಾ, ಶಾಂತಮ್ಮ, ಮೀನಾ, ಪುಟ್ಟಮಾಧವಿ, ಜೆಇ ನಂದೀಶ್, ಡಿವೈಎಸ್ಪಿ ಮಂಜುನಾಥ್, ಪಿಎಸ್‌ಐ ಚಂದ್ರಹಾಸನಾಯಕ್, ಬಿಇಒ ಕಾಂತರಾಜು, ಲಿಂಗರಾಜು, ಬಿಆರ್‌ಸಿ ನಾಗೇಂದ್ರ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ, ಸಿಆರ್‌ಪಿ ರೇಚಣ್ಣ, ಶಿಕ್ಷಕರಾದ ಮಧುಕರ್ ಮಳವಳ್ಳಿ, ಕುಮಾರಸ್ವಾಮಿ, ಕಿರಣ್, ಮಹಾದೇವಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net