ಶಾಲಾ ಕೊಠಡಿ, ಹೈಟೆಕ್ ಶೌಚಗೃಹ ಉದ್ಘಾಟನೆ

31M.D.R.1
ಮದ್ದೂರು ತಾಲೂಕಿನ ಉಪ್ಪಾರದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನೂತನ ಶಾಲಾ ಕೊಠಡಿ ಹಾಗೂ ಶೌಚಗೃಹವನ್ನು ಬಿಇಒ ಸಿ.ಎಚ್.ಕಾಳೀರಯ್ಯ ಉದ್ಘಾಟಿಸಿದರು. ಡಾ.ಬನ್ಸಾಲಿ, ಬಾಲಾಜಿ, ಸುಗುಣನ್, ವಿನಯಾನಂದ, ವಿಪಿನ್‌ಲೋಬ್ರೋ, ಜಯಕುಮಾರ್, ಗೌರಮ್ಮ, ದಿವ್ಯಾ ಶ್ರೀ ಇತರರು ಇದ್ದರು.
Published on

ಮದ್ದೂರು: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಸಹಕರಿಸುತ್ತಿರುವುದು ಅಭಿನಂದನಾರ್ಹ ವಿಷಯ ಎಂದು ಕ್ಷೇತ್ರ ಶೀಕ್ಷಣಾಧಿಕಾರಿ ಸಿ.ಎಚ್.ಕಾಳೀರಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಉಪ್ಪಾರದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಇಂದಿರಾನಗರ ಮತ್ತು ಚಂದ್ರ ಲೇ ಔಟ್‌ನ ರೋಟರಿ ಸಂಸ್ಥೆ ನೀಡಿರುವ ಸುಮಾರು 20 ಲಕ್ಷ ರೂ.ಅನುದಾನದಲ್ಲಿ ನಿರ್ಮಿಸಿರುವ ಶಾಲಾ ಕೊಠಡಿ ಹಾಗೂ ಹೈಟೆಕ್ ಶೌಚಗೃಹವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಸಾಕಷ್ಟು ಶ್ರಮಿಸುತ್ತಿದೆ. ಇದರೆ ಜತೆಗೆ ಸಂಘ, ಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದು ಸಂತೋಷದ ಸಂಗತಿ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಹನುಮಶೆಟ್ಟಿ, ಬೆಂಗಳೂರಿನ ರೋಟರಿ ಸಂಸ್ಥೆಯ ಮುಖ್ಯಸ್ಥ ಡಾ.ಬನ್ಸಾಲಿ, ಬಾಲಾಜಿ, ಸುಗುಣನ್, ವಿಪಿನ್ ಲೋಬ್ರೋ, ವಿನಯಾನಂದ, ಜಯಕುಮಾರ್, ಕವಿತಾ, ನರಸಿ, ಜಗದೀಶ್, ನಿರಂಜನ್, ಎಸ್‌ಡಿಎಂಸಿ ಅಧ್ಯಕ್ಷ ಮಹದೇವು, ಮುಖ್ಯ ಶಿಕ್ಷಕಿ ಗೌರಮ್ಮ, ಶಿಕ್ಷಕಿ ದಿವ್ಯಶ್ರೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net