ಶಾಲಾ ಕಾಲೇಜುಗಳಲ್ಲಿ ಜಾನಪದ ತರಬೇತಿ

kdr kdr rotery
ಕಡೂರಿನಲ್ಲಿ ಕಜಾಪ ಜಿಲ್ಲಾ ಮಹಿಳಾ ಘಟಕದಿಂದ ಮಹಿಳಾ ದಿನ ಆಚರಿಸಲಾಯಿತು. ವಿಶಾಲಾಕ್ಷಮ್ಮ, ಸವಿತಾ, ಶೋಭಾ, ಸುನೀತಾ ಇತರರಿದ್ದರು.
Published on

ಕಡೂರು: ಗ್ರಾಮೀಣ ಭಾಗಗಳಲ್ಲಿ ಜಾನಪದ ಬೆಳೆಸಿಕೊಂಡು ಬರುತ್ತಿರುವ ಕಾರಣ ಮಹಿಳೆಯರಿಗೆ ಹೆಚ್ಚು ಜವಾಬ್ದಾರಿ ಬಂದಿದೆ ಎಂದು ಕನ್ನಡ ಜಾನಪದ ಜಿಲ್ಲಾ ಅಧ್ಯಕ್ಷೆ ವಿಶಾಲಕ್ಷಮ್ಮ ತಿಳಿಸಿದರು.

ಕಜಾಪ ಜಿಲ್ಲಾ ಮಹಿಳಾ ಘಟಕದಿಂದ ಪಟ್ಟಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಸಾಧನೆ ಹಾದಿಯಲ್ಲಿ ಮೇಲೇರುವ ಮೂಲಕ ಪ್ರತಿ ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿದ್ದಾಳೆ. ಇತಿಹಾಸ ಗಮನಿಸಿದರೆ ಹೆಣ್ಣು ಸತಿ ಧರ್ಮ ಪಾಲನೆಯಲ್ಲಿ ಒನಕೆ ಓಬವ್ವ ಮಾದರಿ ಎಂದು ಸ್ಮರಿಸಿದರು.

ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಮಹಿಳಾ ಘಟಕಗಳನ್ನು ದಶಮಾನೋತ್ಸವ ಸಂದರ್ಭದಲ್ಲಿ ಸ್ಥಾಪಿಸಿ ಎಲ್ಲ ಶಾಲಾ ಕಾಲೇಜುಗಳಲ್ಲಿ ಮಹಿಳಾ ತಂಡಗಳಿಗೆ ತರಬೇತಿ ನೀಡಿ ಮಹಿಳಾ ಜಾನಪದ ಜಾಗೃತಿ ಮೂಡಿಸಲಾಗುವುದು ಎಂದರು.

ಕಜಾಪ ಜಿಲ್ಲಾ ಮಹಿಳಾ ಘಟಕದ ಗೌರವಾಧ್ಯಕ್ಷೆ ಸವಿತಾ ಸತ್ಯನಾರಾಯಣ ಮಾತನಾಡಿ, ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಲು ಅವಕಾಶವಿದೆ. ನಿರಂತರವಾಗಿ ಜಿಲ್ಲಾದ್ಯಂತ ಜಾನಪದ ಜಾಗೃತಿ ಮೂಡಿಸುವ ಪ್ರಯತ್ನ ಕಜಾಪ ಮಹಿಳಾ ಘಟಕ ಮಾಡಲಿದೆ ಎಂದು ಹೇಳಿದರು.

ಕಡೂರು ತಾಲೂಕಿನ ಕಜಾಪ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಶ್ರೀನಿವಾಸ್ ಮಾತನಾಡಿ, ಶಾಲಾ ಕಾಲೇಜು ಹಂತದಲ್ಲಿ ಜನಪದ ವಿಚಾರ ಸಂಕಿರಣ, ತರಬೇತಿ ಮತ್ತು ಕಾರ್ಯಾಗಾರ ಏರ್ಪಡಿಸಲಾಗುವುದು. ಶಾಲಾ ಕಾಲೇಜುಗಳಲ್ಲಿ ಮಹಿಳಾ ಘಟಕಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಜ್ಞಾನೇಶ್ವರಿ ಉಪನ್ಯಾಸ ನೀಡಿದರು. ಸುನೀತಾ, ಲತಾ, ಪುಷ್ಪಾ, ಗಾಯತ್ರಮ್ಮ, ತಿಮ್ಮಕ್ಕ, ಗಾಳಪ್ಪ, ಆಶಾ ನವೀನ್, ಕಜಾಪ ಪದಾಧಿಕಾರಿಗಳಾದ ಭಾನುಮತಿ ಮೂಡಿಗೆರೆ, ಸೌಮ್ಯಾ ತರೀಕೆರೆ, ಕಲಾ, ದಾಕ್ಷಾಯಿಣಿಬಾಯಿ, ಮಂಜುಳಾ, ಮಾಲತಿ, ಪದ್ಮಾವತಿ ಶ್ರೀನಿವಾಸ್, ಕಡೂರು ತಾಲೂಕು ಘಟಕದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net