ಶಾಲಾ-ಕಾಲೇಜು ಬಳಿ ತಂಬಾಕು ಮಾರಾಟ, 55ಸಾವಿರ ರೂ. ದಂಡ !

no smoking
Published on

ಬೆಳಗಾವಿ: ಜಿಲ್ಲೆಯ ವಿವಿಧೆಡೆ ಹಾಗೂ ನಗರದ ಶಾಲಾ-ಕಾಲೇಜುಗಳ ಆಸುಪಾಸಿನಲ್ಲಿ (100 ಮೀಟರ್ ಅಂತರದಲ್ಲಿ)ತಂಬಾಕು ಉತ್ಪನ್‌ಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ 55000 ರೂ.ಗಳಷ್ಟು ದಂಡ ವಿಧಿಸಿಸುವ ಮೂಲಕ ಪಾನ್ ಬೀಡಾ ಅಂಗಡಿ ಮಾಲೀಕರಿಗೆ, ಕಿರಾಣಿ ವರ್ತಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಜಿಲ್ಲೆಯಾದ್ಯಂತ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿರುವ ಪೊಲೀಸ್‌ರು 550ಕಡೆಗಳಲ್ಲಿ ಕಿರಾಣಿ ಅಂಗಡಿ ಮತ್ತು ಪಾನ್‌ಬೀಡಾ ಅಂಗಡಿಗಳ ಮಾಲೀಕರಿಗೆ ಒಟ್ಟು 55000 ರೂ. ದಂಡ ವಿಧಿಸಿದ್ದಾರೆ. ಶಾಲಾ-ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ತಂಬಾಕು, ಬೀಡಿ, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್‌ಗಳನ್ನು ಮಾರಾಟ ಮಾಡದಂತೆ ನಿರ್ಬಂಧವಿದೆ. ಆದರೂ ನಿಯಮ ಉಲ್ಲಂಸಿ ಮಾರಾಟ ಮಾಡುವ ಮಾಲೀಕರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net