ಶಾಲಾ ಆವರಣದಲ್ಲಿ ವಿವೇಕ ಶಾಲೆ ಕಟ್ಟಡಕ್ಕೆ ಶಂಕುಸ್ಥಾಪನೆ

ಶಾಲಾ ಆವರಣದಲ್ಲಿ ವಿವೇಕ ಶಾಲೆ ಕಟ್ಟಡಕ್ಕೆ ಶಂಕುಸ್ಥಾಪನೆ
Published on

ಹೊಳೆನರಸೀಪುರ: ಅಮೃತ ಮಹೋತ್ಸವದ ನಿಮಿತ್ತ ಶಿಕ್ಷಣ ಇಲಾಖೆ ವತಿಯಿಂದ ವಿವೇಕ ಶಾಲೆ ಎಂಬುದಾಗಿ ನಿರ್ಮಾಣ ಮಾಡಲು ತಾಲೂಕಿಗೆ 20 ಕೊಠಡಿಗಳು ಸರ್ಕಾರದ ವತಿಯಿಂದ ಮಂಜೂರಾಗಿದೆ ಎಂದು ಶಾಸಕ ಹೆಚ್ ಡಿ ರೇವಣ್ಣ ಹೇಳಿದರು.

ತಾಲೂಕಿನ ಹಳೆಕೋಟೆ ಹೋಬಳಿ ಹಂಗರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಿವೇಕ ಶಾಲೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಒಂದು ವಿಧಾನಸಭಾ ಕ್ಷೇತ್ರಕ್ಕೆ 20 ಕೊಠಡಿಯಂತೆ ಮಂಜೂರಾಗಿದ್ದು ಒಂದು ಕೊಠಡಿ ನಿರ್ಮಿಸಲು ಮೂರು ಲಕ್ಷದ ಅರವತ್ತು ಸಾವಿರ ರುನಂತೆ ಬಿಡುಗಡೆಯಾಗಿದೆ ಶಾಸಕರ ನಿಧಿಯಿಂದಲೂ ಹಂಗ ರಹಳ್ಳಿ ಶಾಲೆಗೆ ಮತ್ತೊಂದು ಕೊಠಡಿ ನಿರ್ಮಿಸಲು ಇಂದು ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.

ತಾಲೂಕಿನ ಹಿರೇಹಳ್ಳಿ ಕೊಪ್ಪಲು ಸರ್ಕಾರಿ ಪ್ರೌಢಶಾಲೆ ಹುಚ್ಚನ ಕೊಪ್ಪಲು ಕಿರಿಯ ಪ್ರಾಥಮಿಕ ಶಾಲೆ, ತೆವಡಹಳ್ಳಿ ಹರದನಹಳ್ಳಿ ಅತ್ತಿ ಚೌಡನಹಳ್ಳಿ ಉದ್ದೂರು ಜೋಡಿ ಗುಬ್ಬಿ ನಿಡುವಣೆ ಜಾಕನಹಳ್ಳಿ ಸೇರಿದಂತೆ ಸುಮಾರು 20 ಗ್ರಾಮಗಳಲ್ಲಿ ಶಿಥಿಲ ಗೊಂಡಿರುವ ಶಾಲೆಗಳಿಗೆ ಕೊಠಡಿ ನಿರ್ಮಾಣ ಮಾಡಲು ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಇಒ ಭಾಗ್ಯಮ್ಮ ,ಸಮಾಜ ಸೇವಕ  ಎನ್ಆರ್ ಅನಂತಕುಮಾರ್ ಲಕ್ಷ್ಮಣ್ ,ವಾಸು ,ಅಕ್ಷರ ದಾಸೋಹ ಅಧಿಕಾರಿ ರವಿಪ್ರಕಾಶ್, ಬಿ ಆರ್ ಪಿ ಯತೀಶ್ ,ಇಂಜಿನಿಯರ್ ಪ್ರಶಾಂತ್ ಗ್ರಾಮಸ್ಥರು ಹಾಜರಿದ್ದರು.ಚಿತ್ರ ಹೊಳೆನರಸೀಪುರತಾಲೂಕು ಹಳೆಕೋಟೆ ಹೋಬಳಿಯ ಹಂಗರಹಳ್ಳಿ ಹಿರಿಯ ಪ್ರಾಥಮಿಕ ಪಾಠಶಾಲೆಯವರಣದಲ್ಲಿ ವಿವೇಕ ಶಾಲೆ ಕಟ್ಟಡಕ್ಕೆ ಶಾಸಕ ಎಚ್ ಡಿ ರೇವಣ್ಣ ಶಂಕುಸ್ಥಾಪನೆ ನೆರೆವೇರಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net