ಬಳ್ಳಾರಿ : ಇಲ್ಲಿನ ಕೌಲ್‌ಬಜಾರ್‌ನ ಧೋಬಿ ಸ್ಟಿಥಟ್‌ನ ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಮನೆಯಲ್ಲಿದ್ದ ಬಟ್ಟೆ, ಬರೆ ಸೇರಿ ಚಿನ್ನಾಭರಣಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಧೋಬಿ ಸ್ಟೀಟ್ ನಿವಾಸಿ ಮಹೇಶ್ ಆದೋನಿ ಎನ್ನುವವರಿಗೆ ಸೇರಿದ್ದ ಮನೆಯಲ್ಲೇ ಬೆಂಕಿ ಹೊತ್ತಿಕೊಂಡಿದೆ. ಮಕ್ಕಳು ಶಾಲೆಗೆ ಹೋಗಿದ್ದು, ನಾನು ಮತ್ತು ನನ್ನ ಪತ್ನಿ ಕೆಲಸಕ್ಕೆ ಹೋಗಿದ್ದೇವೆ. ಈ ವೇಳೆ ಮನೆಯಲ್ಲಿನ ವೈಯರ್‌ಗಳು ಶಾರ್ಟ್ ಸರ್ಕಿಟ್ ಆಗಿ, ಬೆಂಕಿ ಹೊತ್ತಿಕೊಂಡಿದ್ದು, ಮನೆಯಲ್ಲಿ, ಬೆಡ್ ರೂಮ್‌ನ ಬೀರುವಾದಲ್ಲಿದ್ದ 30 ಸಾವಿರ ರೂ. ಮೌಲ್ಯದ ಬಟ್ಟೆಗಳು, 1.40 ಲಕ್ಷ ರೂ. ಮೌಲ್ಯದ 7 ತೊಲೆ ಚಿನ್ನಾಭರಣ, 12 ಸಾವಿರ ರೂ. ನಗದು ಹಣ ಸುಟ್ಟು ನಷ್ಟವಾಗಿದೆ. ಇದರೊಂದಿಗೆ ಪಡಿತರ ಚೀಟಿ, ಬ್ಯಾಂಕ್ ಪಾಸ್‌ಬುಕ್, ಮನೆಯಲ್ಲಿದ್ದ ದವಸ, ಧಾನ್ಯಗಳು ಸೇರಿ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ. ಇಸ್ತ್ರಿ ಮಾಡಲೆಂದು ಗಿರಾಕಿಗಳು ನೀಡಿದ್ದ ಸುಮಾರು 25 ಸಾವಿರ ರೂ. ಮೌಲ್ಯದ ಬಟ್ಟೆಗಳು ಸಹ ಸುಟ್ಟಿದ್ದು, ಒಟ್ಟು 3,07,000 ರೂ. ಮೌಲ್ಯದ ವಸ್ತುಗಳು ನಷ್ಟವಾಗಿವೆ. ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಮನೆಯ ಮಾಲೀಕ ಮಹೇಶ್ ನೀಡಿದ್ದ ದೂರಿನ ಮೇರೆಗೆ ಕೌಲ್‌ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.