ಶಾರ್ಟ್ ಸರ್ಕ್ಯೂಟ್‌ಗೆ ಹೊತ್ತಿ ಉರಿದ ಮನೆ

fire1
Published on

ಬೆಳಗಾವಿ : ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹೊತ್ತಿಕೊಂಡ ಬೆಂಕಿಯಿಂದ ನಗರದಲ್ಲಿನ ಮನೆಯೊಂದು ಬೆಂಕಿಗಾಹುತಿಯಾದ ಘಟನೆ ಗುರುವಾರ ಸಂಭವಿಸಿದೆ.
ನಗರದಲ್ಲಿನ ಹೇಮು ಕಿಲಾಚಿ ಚೌಕ್ ಸಮೀಪದ ಕಾಂಗಲಿಗಲ್ಲಿಯ ಧನರಾಜ ಬಾಲಾಜಿ ಠಾಕೋರ್ ಎಂಬುವವರ ಮನೆಯಲ್ಲಿ ಗುರುವಾರ ಮಧ್ಯಾಹ್ನ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲಿಯೇ ಇಡೀ ಮನೆಗೆ ವ್ಯಾಪಿಸಿಕೊಂಡು ಸುಟ್ಟು ಕರಕಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ, ಎರಡು ವಾಹನಗಳನ್ನು ಬಳಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿ ನಂದಿಸಿದರೂ ಕಟ್ಟಿಗೆಯ ಮನೆಯಾಗಿದ್ದರಿಂದ ಬಹುತೇಕ ಮನೆ ಸುಟ್ಟು ಲಕ್ಷಾಂತರ ರೂ.ಹಾನಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದು, ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚಾರಣೆಯಲ್ಲಿ ಜಿಲ್ಲಾ ಗ್ನಿಶಾಮಕ ಅಧಿಕಾರಿ ಎಸ್.ಎಸ್.ನೀಲಗಾರ, ಠಾಣಾಧಿಕಾರಿ ವಿ.ಎಸ್.ಟಕ್ಕೇಕಾರ್, ಐ.ವೈ.ಮಡಿಗೇರ, ಐ,ಎಂ, ಹಿರೇಮಠ, ವಿಜಯ ಪಾಟೀಲ, ಅರ್ಜುನ್ ದೇಯನ್ನವರ, ಬಸವರಾಜ ಪೂಜಾರಿ, ಬನಸು ಬುಡ್ಡನವ್ನವರ, ಮಹೇಶ ಮಾಳಗಿಮನಿ, ಸಿ.ಎಸ್.ಹಿರೇಮಠ, ನಾಗಪ್ಪ ಸೇರಿದಂತೆ ಇನ್ನಿತರ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net