

ಹುಬ್ಬಳ್ಳಿ: ಕಲ್ಯಾಣನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಭಾಂಗಣದಲ್ಲಿ ಡಿ. 22ರಂದು ಶ್ರೀಮಾತೆ ಶಾರದಾದೇವಿ ಜಯಂತಿ ಉತ್ಸವ ಆಯೋಜಿಸಲಾಗಿದೆ.
ಆಶ್ರಮದ ಅಧ್ಯಕ್ಷರಾದ ಶ್ರೀ ತೇಜಸಾನಂದಜೀ ಮಹಾರಾಜ್, ಶ್ರೀ ಬುದ್ಧಿಯೋಗಾನಂದಜೀ ಮಹಾರಾಜ್ ಸಾನ್ನಿಧ್ಯದಲ್ಲಿ ಬೆಳಗ್ಗೆ 10 ಗಂಟೆಗೆ ಶ್ರೀಲಲಿತಾಸಹಸ್ರನಾಮ ಪಾರಾಯಣ, 10.45ಕ್ಕೆ ಶ್ರೀ ಶಾರದಾದೇವಿ ಹೋಮ, ಮಧ್ಯಾಹ್ನ 12.30ಕ್ಕೆ ಭಜನೆ, ಆರತಿ ಮಹಾಪ್ರಸಾದ ಇರಲಿದೆ.</p><p>ಡಾ. ಶೈಲಜಾ ಆಮೂರ ಒತ್ತಡದ ಜೀವನಕ್ಕೊಂದು ಉತ್ತರ - ಶ್ರೀಮಾತೆ ನಿಷಯ ಕುರಿತು ಉಪನ್ಯಾಸ ನೀಡುವರು.