ಶಾಪ-ಪಾಪ ಕುಷ್ಠರೋಗಕ್ಕೆ ಕಾರಣವಲ್ಲ

oplus_0
oplus_0
Published on

ಚಿತ್ರದುರ್ಗ: ಕುಷ್ಠ ರೋಗವು ಶಾಪ-ಪಾಪದಿಂದ ಬರುವ ಕಾಯಿಲೆಯಲ್ಲ, ಅನಾದಿ ಕಾಲದಿಂದ ಇರುವಂಥ ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದೆಂದು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಜಿ.ಒ.ನಾಗರಾಜ್ ಹೇಳಿದರು.

ಕುಷ್ಠರೋಗ ಪ್ರಕರಣ ಪತ್ತೆ ಅಭಿಯಾನ ಜಾಗೃತಿ ಜಾಥಾ ಅಂಗವಾಗಿ ಬುಧವಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಕಾರ‌್ಯಕ್ರಮ ದಲ್ಲಿ ಮಾತನಾಡಿ, ಈ ರೋಗದೆಡೆ ಭಯ ಬೇಡ, ಮೈಕೋ ಬ್ಯಾಕ್ಟೀರಿಯಂ ಲೆಪ್ರೇ ಎಂಬ ರೋಗಾಣು ಕಾಯಿಲೆಗೆ ಕಾರಣವಾಗಿದೆ. ರೋಗಿ ಕೆಮ್ಮು, ಸೀನುವುದರಿಂದ ರೋಗ ಹರಡುತ್ತದೆ. ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಸಾರ್ವಜನಿಕರು ಮನೆ ಗಳಿಗೆ ಬರುವ ತಂಡಗಳಿಂದ ಪರೀಕ್ಷೆ ಮಾಡಿಸುವ ಮೂಲಕ ಅಭಿಯಾನಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಪ್ರಸ್ತುತ 42 ಕುಷ್ಠ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾದ್ಯಂತ ನವೆಂಬರ್4 ರಿಂದ 21 ರವರೆಗೆ ರೋಗ ಪತ್ತೆ ಅಭಿಯಾನ ನಡೆಯಲಿದೆ ಎಂದರು.

ಜಿಲ್ಲಾಸ್ಪತ್ರೆ ಡಿಎಸ್ ಡಾ.ಎಸ್.ಪಿ.ರವೀಂದ್ರ ಜಾಥಾಕ್ಕೆ ಚಾಲನೆ ನೀಡಿದರು. ಮದಕರಿ ನಾಯಕರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದ ಬಳಿಕ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಾಥಾ ಸಮಾಪನಗೊಂಡಿತು.

ಡಿಎಂಒ ಡಾ.ಎನ್.ಕಾಶಿ, ಆರ್‌ಸಿಎಚ್‌ಒ ಡಾ.ಡಿ. ಎಂ.ಅಭಿನವ್, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಗೌರಮ್ಮ, ಎನ್.ಎಸ್.ಮಂಜುನಾಥ್, ಮೂಗಪ್ಪ, ವೈ.ಟಿ.ತಿಪ್ಪೇಸ್ವಾಮಿ, ಚಂದ್ರಪ್ಪ, ಮಂಜುನಾಥ್, ಗಂಗಾಧರೆಡ್ಡಿ, ರುದ್ರಮುನಿ, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಇದ್ದರು. ಕುಷ್ಠ ರೋಗದೆಡೆ ಜಾಗೃತಿ ಮೂಡಿಸುವ ಘೋಷಣಾ ಫಲಕಗಳನ್ನು ಜಾಥಾದಲ್ಲಿ ಪ್ರದರ್ಶಿಸಲಾಯಿತು.

ತಾಲೂಕು ಚಾಲನಾ ಸಮಿತಿ ಸಭೆ

ವಿವಿಧ ಇಲಾಖೆಗಳು, ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ, ಕುಷ್ಠರೋಗ ಮುಕ್ತ ತಾಲೂಕು ನಿರ್ಮಾಣ ಗುರಿ ಸಾಧಿಸಬೇಕೆಂ ದು ಚಿತ್ರದುರ್ಗ ತಹಸೀಲ್ದಾರ್ ಡಾ.ನಾಗವೇಣಿ ಹೇಳಿದರು.

ತಮ್ಮ ಕಚೇರಿಯಲ್ಲಿ ಬುಧವಾರ ಚಾಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕಿದೆ ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್, ತಾಲೂಕಿನ 265 ಹಳ್ಳಿಗಳಲ್ಲೂ ಕುಷ್ಠರೋಗ ಪ್ರಕರಣ ಪತ್ತೆ ಅಭಿಯಾನಕ್ಕೆ ಸಿದ್ಧತೆ ಯಾಗಿದೆ ಎಂದರು.

ಪ್ರಭುದೇವ, ಮಂಜುಳಾ, ನಾಗರಾಜ್, ಎನ್.ಎಸ್.ಮಂಜುನಾಥ್, ಡಾ.ಮಹೇಂದ್ರಕುಮಾರ್, ಡಾ. ಮಂಜುಳಾ, ಡಾ.ಸುಪ್ರೀತಾ,ಪೂಜಾ, ಮೊಹಮ್ಮದ್ ಅಲಿ, ಹಬೀಬ್, ಪ್ರವೀಣ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net