ಶಾಗ್ಯ ಗ್ರಾಮಕ್ಕೆ ಡಿಸಿ ರಮೇಶ್ ಭೇಟಿ

27 HANUR 1
ಶಾಗ್ಯ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಭೇಟಿ ನೀಡಿ ಮತದಾರರಿಂದ ಮಾಹಿತಿ ಪಡೆದರು. ಎಸಿ ಗೀತಾ ಹುಡೇದಾ, ತಹಸೀಲ್ದಾರ್ ಆನಂದಯ್ಯ ಇದ್ದರು.
Published on

ಹನೂರು: ಮತದಾರರ ಪಟ್ಟಿ ಪರಿಷ್ಕರಣೆ ಖಚಿತ ಪಡಿಸುವಕೊಳ್ಳುವ ಸಂಬಂಧ ಸೋಮವಾರ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ತಾಲೂಕಿನ ಶಾಗ್ಯ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅಧಿಕಾರಿಗಳಿಂದ ಮಾಹಿತಿ ಪಡೆದು ಮನೆ ಮನೆಗೆ ತೆರಳಿ ಮತದಾರರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ, ಪಟ್ಟಿಯಲ್ಲಿರುವ ಹೆಸರುಗಳ ಬಗ್ಗೆ ಖಚಿತಪಡಿಸಿಕೊಂಡರು. ಅಲ್ಲದೆ ಪಟ್ಟಿಯಿಂದ ಹೆಸರು ಕೈ ಬಿಟ್ಟಿರುವುದರ ಬಗ್ಗೆಯೂ ಮಾಹಿತಿ ಪಡೆದರು. ಇದಕ್ಕೂ ಮುನ್ನ ಮಣಗಳ್ಳಿ, ನಾಗನತ್ತ ಹಾಗೂ ಬಂಡಳ್ಳಿ ಗ್ರಾಮಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಪ ವಿಭಾಗಾಧಿಕಾರಿ ಗೀತಾ ಹುಡೇದಾ, ತಹಸೀಲ್ದಾರ್ ಆನಂದಯ್ಯ, ಆರ್‌ಐ ಮಹದೇವಸ್ವಾಮಿ, ಪಿಡಿಒ ರಾಮು, ಗ್ರಾಮಲೆಕ್ಕಿಗ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net