

ಲಕ್ಷ್ಮೇಶ್ವರ: ಧನುರ್ವಸದ ನಿಮಿತ್ತ ತಾಲೂಕಿನ ಶಿಗ್ಲಿ ಗ್ರಾಮದ ಹೊಸಪೇಟೆ ಓಣಿಯ ಶಾಖಾಂಬರಿ ದೇವಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆದವು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೃಂಗರಿಸಿದ ಪಲ್ಲಕ್ಕಿಯಲ್ಲಿ ಶಾಖಾಂಬರಿ ದೇವಿಯ ಉತ್ಸವ ಮೂರ್ತಿ ಮತ್ತು ಭಾವಚಿತ್ರದ ಭವ್ಯ ಮೆರವಣಿಗೆ ಸಕಲ ವಾದ್ಯವೈಭವಗಳೊಂದಿಗೆ ನಡೆಯಿತು.
ಪ್ರತಿವರ್ಷದಂತೆ ಈ ವರ್ಷವೂ ಪ್ರಸಾದಕ್ಕಾಗಿ 1.5 ಕ್ವಿಂಟಾಲ್ ಬೆಲ್ಲ, 1.25 ಕ್ವಿಂಟಾಲ್ ಕಡ್ಲಿಬೇಳೆ, 1 ಕ್ವಿಂಟಾಲ್ ಹಿಟ್ಟು ಮತ್ತು 80 ಕೆಜಿ ಅಡುಗೆ ಎಣ್ಣೆ ಬಳಸಿ 5 ಸಾವಿರ ಕರಿಗಡಬುಗಳನ್ನು ಸಿದ್ಧಪಡಿಸಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನ ಕಮಿಟಿ ಅಧ್ಯಕ್ಷ ಎನ್.ಬಿ. ಹರವಿ, ಕೃಷ್ಣ ಬಿದರಳ್ಳಿ, ಆದೇಶ ಹುಲಗೂರ, ಈರಪ್ಪ ಮೂಲಿಮನಿ, ಶಿವಾನಂದ ಮುದಗಲ್, ಗಣೇಶ ಅಸುಂಡಿ, ರಾಜರತ್ನ ಹುಲಗೂರ, ಶಂಕರ ಕಳ್ಳಿ, ಮನೋಹರಪ್ಪ ಜನಿವಾರದ, ಸಂಕಪ್ಪ ಕರ್ಜಗಿ, ಶಾಖಾಂಭರಿ ದೇವಿ ಮಹಿಳಾ ಕಮೀಟಿಯ ನೀಲಮ್ಮ ಬಳ್ಳಿ, ಸುಬ್ಬಮ್ಮ ಹೂಗಾರ, ಸಾವಿತ್ರಮ್ಮ ಮುದಗಲ್, ಶಾರಮ್ಮ ಜನಿವಾರದ, ಶಾಂತಕ್ಕ ಮುದಗಲ್, ಅರ್ಚಕ ಕೃಷ್ಣ ಪೂಜಾರಿ, ಇತರರಿದ್ದರು.
EndFragment