ಶಾಂತಿಯುತವಾಗಿ ಹಬ್ಬ ಆಚರಿಸಿ

alm 11-1 sabhe
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಸೋಮವಾರ ಆಲಮೇಲ ಠಾಣೆ ವತಿಯಿಂದ ಹೋಳಿ ಹಾಗೂ ರಂಜಾನ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಪಿಎಸ್‌ಐ ಅರವಿಂದ ಅಂಗಡಿ ಮಾತನಾಡಿದರು. ಮಾಜಿ ಜಿಪಂ ಸದಸ್ಯ ಬಿ.ಆರ್. ಯಂಟಮನ, ಪಪಂ ಅಧ್ಯಕ್ಷ ಸಾಧೀಕ ಸುಂಬಡ, ಪ್ರಭು ವಾಲಿಕಾರ ಇತರರಿದ್ದರು.
Published on

ಆಲಮೇಲ: ಪಟ್ಟಣದಲ್ಲಿ ಹಿಂದು- ಮುಸ್ಲಿಮರು ಸೌಹಾರ್ದಯುತ, ಶಾಂತಿಯುತವಾಗಿ ಹಬ್ಬ ಆಚರಿಸಬೇಕೆಂದು ಪಿಎಸ್‌ಐ ಅರವಿಂದ ಅಂಗಡಿ ಹೇಳಿದರು.

ಹೋಳಿ ಹಬ್ಬ ಹಾಗೂ ರಂಜಾನ್ ನಿಮಿತ್ತ ಪಟ್ಟಣದ ಪೊಲೀಸ ಠಾಣೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲೇ ಪಟ್ಟಣ ಭಾವೈಕ್ಯದ ತವರೂರಾಗಿದೆ. ಹಬ್ಬಗಳ ಆಚರಣೆಯಲ್ಲಿ ಯಾರಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತ ಕಾರ್ಯ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರಲ್ಲದೆ, ಪ್ರತಿ ಪಟ್ಟಣ, ಗ್ರಾಮದಲ್ಲಿ ಸಹೋದರತ್ವದಿಂದ ಜೀವನ ನಡೆಸಿದರೆ ಅವುಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಮಾಜಿ ಜಿಪಂ ಸದಸ್ಯ ಬಿ.ಆರ್. ಯಂಟಮನ, ಪಪಂ ಅಧ್ಯಕ್ಷ ಸಾಧೀಕ ಸುಂಬಡ, ಪ್ರಭು ವಾಲಿಕಾರ, ಮಹಿಬೂಬ್ ಮಸಳಿ, ಪಪಂ ಸದಸ್ಯರಾದ ಚಂದ್ರಕಾಂತ ಹಳೇಮನಿ, ಭಾಗ್ಯವಂತ ಆಲಮೇಲಕರ, ಮುಖಂಡರಾದ ಗುಂಡು ಮೇಲಿನಮನಿ, ಶ್ರೀಶೈಲ ಭೋವಿ, ಈರಣ್ಣಾ ಕಲ್ಲೂರ, ದಯಾನಂದ ನಾರಾಯಣಕರ, ಕ್ರೈಂ ಪಿಎಸೈ ಎಚ್.ಎಂ. ಪಡಶೆಟ್ಟಿ, ಸಿಬ್ಬಂದಿ ಸಿದ್ದರಾಯ ಪಾಟೀಲ, ಸುರೇಶ ಯತ್ನಾಳ, ಸಲೀಮ್ ಸೌದಿ ಇತರರಿದ್ದರು.

ಬಾಳೇಶ ಮೀಡೆದಾರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net