ಶಾಂತಿಯುತವಾಗಿ ಹಬ್ಬ ಆಚರಿಸಿ

Capture1
Published on

ಭಾಲ್ಕಿ: ಎಲ್ಲ ಸಂಘಟಕರು ಗಲಭೆಗೆ ಅವಕಾಶ ಕೊಡದೆ ಶಾಂತಿಯುತವಾಗಿ ಗಣೇಶನ ಹಬ್ಬ ಆಚರಿಸಬೇಕು ಎಂದು ಡಿವೈಎಸ್ಪಿ ಪೃಥ್ವಿಕ್ ಶಂಕರ್ ಹೇಳಿದರು. ಬಸವೇಶ್ವರ ವೃತ್ತದ ಹಿಂಭಾಗದಲ್ಲಿ ಗಣೇಶೋತ್ಸವ ನಿಮಿತ್ತ ಶ್ರೀ ಬಸವೇಶ್ವರ ಚೌಕ್ ಗಣೇಶ ಮಂಡಳದಿಂದ ಬುಧವಾರ ಪ್ರತಿಷ್ಠಾಪಿಸಿದ ವಿಘ್ನೇಶ್ವರ ಮೂತರ್ಿಗೆ ವಿಶೆಷ ಪೂಜೆ ಸಲ್ಲಿಸಿದ ಅವರು, ವಿವಿಧ ಮಂಡಳದವರು ಸುಮಾರು 46 ಕಡೆ ಮೂತರ್ಿ ಪ್ರತಿಷ್ಠಾಪನೆ ಮಾಡಿದ್ದಾರೆ. ಪಟ್ಟಣ ಮೊದಲಿನಿಂದಲೂ ಶಾಂತಿ ಸುವ್ಯವಸ್ಥೆಗೆ ಹೆಸರಾಗಿದೆ. ಹೀಗಾಗಿ ಎಲ್ಲೂ ಯಾರೊಬ್ಬರೂ ಶಾಂತಿಗೆ ಭಂಗ ತರುವಂಥ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು. ಸಿಪಿಐ ಗುರಣ್ಣ ಹೆಬ್ಬಾಳ, ಶ್ರೀ ಬಸವೇಶ್ವರ ಚೌಕ್ ಗಣೇಶ ಮಂಡಳ ಅಧ್ಯಕ್ಷ ಸಂಗಮೇಶ ಹುಣಜೆ ಮದಕಟ್ಟಿ, ಶಶಿಧರ ಕೋಸಂಬೆ, ರವೀಂದ್ರ ಚಿಡಗುಪ್ಪೆ, ರಾಜಕುಮಾರ ಬಿರಾದಾರ್, ಮಹಾದೇವ ಕಾಶಿಸ್ವಾಮಿ, ಪ್ರಮುಖರಾದ ಶಿವು ರುಮ್ಮಾ, ಜಗದೀಶ ಬಿರಾದಾರ್, ಬಸು ಕನಕಟ್ಟೆ, ಲೋಕೇಶ ಪಾಟೀಲ್, ಸತೀಶ ವಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net