

ಹೆಬ್ರಿ: ಜೀವನದಲ್ಲಿ ಪರೋಪಕಾರ ಮಾಡಿದರೆ ಒಳಿತಾಗುತ್ತದೆ. ಶಾಂತಿನಿಕೇತನದವರು ಸಾಮಾಜಿಕ ಕಾರ್ಯದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಇಲ್ಲಿ ನಡೆಯುವ ಎಲ್ಲ ಚಟುವಟಿಕೆಗಳು ಹಿಂದು ಧರ್ಮದ ಉಳಿವಿಗಾಗಿ ನಡೆಯುತ್ತದೆ ಎಂದು ವಿದ್ವಾನ್ ವೇದವ್ಯಾಸತಂತ್ರಿ ಮಡಾಮಕ್ಕಿ ಹೇಳಿದರು.
ಬುಧವಾರ ಶಾಂತಿನಿಕೇತನ ಕಚೇರಿಯಲ್ಲಿ ಗಣಪತಿ ಹೋಮ ಹಾಗೂ ವಾಹನ ಪೂಜೆ ನೆರವೇರಿಸಿ ಮಾತನಾಡಿದರು. ಅರ್ಚಕ ಗಣೇಶ್ ಉಳಿತ್ತಾಯ, ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷ ರಾಜೇಶ್, ಉಪಾಧ್ಯಕ್ಷ ದೀಕ್ಷಿತ್ ನಾಯಕ್, ಸಿಇಒ ನರೇಂದ್ರ ಎಸ್.ಮರಸಣಿಗೆ, ಆಡಳಿತ ಮಂಡಳಿ ಸದಸ್ಯರಾದ ಜಯಕರ್, ಪ್ರಸನ್ನ, ಕೆ.ಗಣೇಶ್, ವ್ಯವಸ್ಥಾಪಕಿ ರಾಜೇಶ್ರೀ, ಸದಸ್ಯರಾದ ನಾಗರಾಜ್, ಕಲಾವತಿ, ಅನಿತಾ, ಅಕ್ಷತಾ ಇದ್ದರು.