ಶಾಂತಿಗೆ ಬುದ್ಧ ಸಂದೇಶಗಳು ಅಗತ್ಯ

IMG-20231024-WA0176
Published on

ಚಿಟಗುಪ್ಪ: ಪ್ರಸ್ತುತ ದಿನಗಳಲ್ಲಿ ಸೃಷ್ಟಿಯಾಗಿರುವ ಅಶಾಂತಿಯ ವಾತಾವರಣದಲ್ಲಿ ಜಗತ್ತಿಗೆ ಭಗವಾನ ಬುದ್ಧರ ಶಾಂತಿಯ ಸಂದೇಶ ಅಗತ್ಯವಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ರೇಕುಳಗಿ ಮೌಂಟ್‌ನಲ್ಲಿರುವ ಅನಾಥ ಪಿಂಡಕ ಬುದ್ಧ ವಿಹಾರದಲ್ಲಿ ಮಂಗಳವಾರ ಏರ್ಪಡಿಸಿದ್ದ ೬೭ನೇ ಧಮ್ಮ ಚಕ್ರ ಪರಿವರ್ತನಾ ದಿನ ಹಾಗೂ ಅಶೋಕ ವಿಜಯ ದಶಮಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಬುದ್ಧರ ಶಾಂತಿ ಸಂದೇಶ ಹಾಗೂ ಧರ್ಮೋಪದೇಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.

ಸಾಮೂಹಿಕ ಬುದ್ಧ ವಂದನೆ: ಬುದ್ಧವಿಹಾರದಲ್ಲಿ ಬೆಳಗ್ಗೆ ೭ಕ್ಕೆ ಭಿಕ್ಕು ಸಂಘದಿಂದ ಸಾಮೂಹಿಕವಾಗಿ ಬುದ್ಧ ವಂದನೆ, ಧಮ್ಮ ಧ್ವಜಾರೋಹಣ, ಬುದ್ಧ ಪ್ರವಚನ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಧಮ್ಮ ಚಕ್ರ ಪರಿವರ್ತನೆ ನಿಮಿತ್ತ ರಾಜ್ಯ ಸೇರಿ ತೆಲಂಗಾಣ, ಮಹಾರಾಷ್ಟçದಿಂದ ಅಪಾರ ಸಂಖ್ಯೆಯ ಬುದ್ಧ ಉಪಾಸಕ, ಉಪಾಸಕಿಯರು ಆಗಮಿಸಿ, ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಮಹಾರಾಷ್ಟ್ರದ ಭಿಕ್ಕು ಧಮ್ಮನಾಗ ಹತ್ಯಾಳ ಆಶೀರ್ವಚನ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿದರು. ವಿಹಾರದ ಭಂತೆ ರೇವತ್ ಅಧ್ಯಕ್ಷತೆ ವಹಿಸಿದ್ದರು. ಲಡಾಕ್ ಭಿಕ್ಕು ಬುದ್ಧಪಾಲ, ತ್ರಿಪುರಾ ಭಿಕ್ಕು ಬೋಧಿರತ್ನ, ಮೌಂಟನ ಭಿಕ್ಕು ಧರ್ಮಪಾಲ, ಭಿಕ್ಕುಣಿ ಮಹಾಪ್ರಜಾಪತಿ, ಮಾಜಿ ಎಂಎಲ್‌ಸಿ ಕೆ.ಪುಂಡಲಿಕರಾವ, ಪ್ರಮುಖರಾದ ಅಮೃತರಾವ ಚಿಮ್ಮಕೋಡೆ, ಬಸವರಾಜ ಮಾಳಗೆ, ಬಾಬಾ ಪಟೇಲï, ಅನಿಲ ಕುಮಾರ ಬೆಲ್ದಾರ್, ಪಾಂಡುರAಗ ಕಿರಣ, ರಾಘವೇಂದ್ರ ಕಿರಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net