ಶಾಂತಿಗೆ ಪಾಲಿಸಿ ಬುದ್ಧ ಉಪದೇಶ

Pravachan Samarop
Published on

ಬೀದರ್: ಭಗವಾನ ಗೌತಮ ಬುದ್ಧರ ಉಪದೇಶ ಪ್ರತಿಯೊಬ್ಬರೂ ಪಾಲಿಸಿದರೆ ದೇಶದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಿ ಇಡೀ ಸಮಾಜವು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತದೆ ಎಂದು ಪೂಜ್ಯ ಭಂತೆ ಜ್ಞಾನಸಾಗರ ಥೇರೊ ಹೇಳಿದರು.

ನಗರದ ಚಿದ್ರಿ ರಸ್ತೆಯ ಕುದರೆ ಕಲ್ಯಾಣ ಮಂಟಪದಲ್ಲಿ ಧಮ್ಮ ಸಂಸ್ಕೃತಿ ಮತ್ತು ಶಿಕ್ಷಣ ಜಾಗೃತಿ ವೇದಿಕೆಯಿಂದ ಇತ್ತೀಚೆಗೆ ಜರುಗಿದ ಧಮ್ಮ ಪದ ಪ್ರವಚನ ಸಪ್ತಾಹ ಸಮಾರೋಪದಲ್ಲಿ ಮಾತನಾಡಿ, ಬುದ್ಧರು ಸರ್ವರ ಸುಖ, ಶಾಂತಿಗಾಗಿ ಮತ್ತು ಎಲ್ಲರೂ ಪ್ರಜ್ಞಾವಂತರಾಗಿ ಬಾಳಲು ಪರಮಶ್ರೇಷ್ಠವಾದ ಧಮ್ಮ ಬೋಧನೆ ಮಾಡಿದ್ದಾರೆ. ಬುದ್ಧ ತತ್ವಗಳಂತೆ ನಡೆಯುವುದು ಇಂದಿನ ಅಗತ್ಯವಿದೆ ಎಂದರು.

ಪ್ರವಚನಕಾರ ಪೂಜ್ಯ ಭಂತೆ ಸಂಘರಕ್ಖಿತ್ ಮಾತನಾಡಿ, ಬುದ್ಧ ಮಹಾನ್ ವಿಜ್ಞಾನಿ. ಮನುಷ್ಯನ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಕಂಡು ಹಿಡಿದುಕೊಟ್ಟ. ಮನಸ್ಸೇ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಹೀಗಾಗಿ ಮನುಷ್ಯನು ಮೊದಲು ಮನಸ್ಸನ್ನು ಶುದ್ಧೀಕರಣ ಮಾಡಿಕೊಳ್ಳಬೇಕು. ದಿನವೂ ಧ್ಯಾನ ಮಾಡಬೇಕು ಎಂದು ತಿಳಿಸಿದರು.

ಈ ವೇಳೆ ಶಂಭುಲಿಂಗ ಕುದರೆ, ಜೈಶ್ರೀ ಕುದರೆ, ಲಂಕೇಶ ಟಾಳೆ, ಧೀರಜ್ ಮೋಘಾ, ದರ್ಶನ ಮೋಘಾ, ಪುನೀತ ಕಾಂಬ್ಳೆ , ರಾಜ್ ಲಾಖೆ, ಪ್ರಶಾಂತ ಜೋಶಿ, ಪೂಜಾ ಜೋಶಿ, ವಾಣಿಶ್ರೀ, ಅಶೋಕಕುಮಾರ ಮೇಲ್ಕೇರಿ ಅವರನ್ನು ಸನ್ಮಾನಿಸಲಾಯಿತು.

ಭಂತೆ ಶಾಂತಿಪಾಲ್, ಮಾತಾಜಿ ಅರ್ಚಸ್ಮತಿ, ಮಾತಾಜಿ ಖೇಮಾ, ಸಂಘಪಾಲ, ಪ್ರಮುಖರಾದ ಕೀಶೋರಕುಮಾರ ಮೇಟಿ, ಡಾ. ಜಯಶಾಲಿನಿ ಮುಡಬಿ, ಶಿವಾನಂದ ಕಸ್ತೂರೆ, ಸಂತೋಷ ಬೋರೆ, ಸುರೇಶ ಸಿಂಧೆ, ಮಹೇಶ ಟಾಳೆ, ಸುರೇಶ ಜೋಜನಾಕರ್, ಕಿಶೋರ ನವಲಾಸಪುರ , ಧಮ್ಮಪಾಲ, ಭೀಮಣ್ಣ ಭಾವಿಕಟ್ಟಿ , ವಿಠಲರಾವ್ ಮಾಳಗೆ, ನಾಗೇಂದ್ರನಾಥ ಸಿಂಗೋಡೆ, ಮಾಣಿಕರಾವ ಗೋಡಬೋಲೆ, ಶೇಷಪ್ಪ ಗುಮತಾಪುರೆ, ಕೃಷ್ಣಮೂತರ್ಿ, ಗಣಪತಿ ಮಿಠಾರೆ ಇದ್ದರು. ಅನೀಲಕುಮಾರ ಶಾಂತಪುರೆ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಜನವಾಡಕರ್ ಸ್ವಾಗತಿಸಿದರು. ದಿಲೀಪ ಮೋಘಾ ನಿರೂಪಣೆ ಮಾಡಿದರು. ಸಂಜೀವ್ ರತ್ನಾಕರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net