ಶಾಂತಿ, ಸಹಾಬಾಳ್ವೆಯಿಂದ ಜೀವನ ಸಾಗಿಸಿ

28ydg03
Published on

ಯಾದಗಿರಿ: ನಗರದಲ್ಲಿ ಗುರುವಾರ ಮುಸ್ಲಿಂ ಬಾಂಧವರು ಈದ್ಮಿಲಾದ್ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಿದರು.
ಹಬ್ಬದ ನಿಮಿತ್ತ ಮೆರವಣಿಗೆ ನಗರದ ಮೈಲಾಪುರ ಬೇಸ್ನಿಂದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಾವಿರಾರು ಮುಸ್ಲಿಂ ಬಾಂಧವರಿಗೆ ಮೆರವಣಿಗೆ ಮಾರ್ಗದುದ್ದಕ್ಕೂ ಸಿಹಿ, ತಂಪು ಪಾನಿಯಗಳನ್ನು ಹಾಗೂ ಅಲ್ಪ ಉಪಹಾರವನ್ನು ವಿತರಿಸಲಾಯಿತು. ಬೆಳಗ್ಗೆ ನಗರದ ಎಲ್ಲ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲೀಂ ಬಾಂಧವರು ತಮ್ಮ ಮಿತ್ರರೊಂದಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಮೈಲಾಪುರ ಬೇಸ್ನ ಹಕ್ಕಾನಿ ಮಸೀದಿಯಲ್ಲಿ ನಡೆದ ಈದ್ಮಿಲಾದ್ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ನಾಗರಿಕ ಸಮಾಜದಲ್ಲಿ ಜೀವನ ಸಾಗಿಸುವ ಪ್ರತಿಯೊಬ್ಬರು ಶಾಂತಿ, ಸಹನೆ, ಸಹಭಾಳ್ವೆ, ಸಹೋದರತೆ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಒಗ್ಗಟ್ಟಿ ನಲ್ಲಿ ಮುನ್ನಡೆಯಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಡಾ.ಎ.ಬಿ.ಮಾಲಕರಡ್ಡಿ, ಡಾ.ವೀರಬಸವಂತರಡ್ಡಿ ಮುದ್ನಾಳ್, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಪ್ರಮುಖರಾದ ಲಾಯಕ್ ಹುಸೇನ್ ಬಾದಲ್, ವಹೀದ್ ಮೀಯಾ, ಮನಸೂರ್ ಅಪ್ಘಾನ್, ಜಿಲಾನಿ ಅಫ್ಘಾನ್, ಇನಾಯುತ ಉಲ್ ರೆಹೆಮಾನ್, ಆರೀಫ್ ಕಾಡ್ಲೂರ, ಡಾ.ಭೀಮಣ್ಣ ಮೇಟಿ, ಮೌಲಾಲಿ ಅನಪುರ, ಹನಮೇಗೌಡ ಬೀರನಕಲ್ ಇದ್ದರು.

ಹಬ್ಬದ ನಿಮಿತ್ತ ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net